Peddi Pehelwan Glimpse: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ಪೆದ್ದಿ ಚಿತ್ರತಂಡದ ಕಡೆಯಿಂದ ರಾಮ್ ಚರಣ್ ಹುಟ್ಟು ಹಬ್ಬಕ್ಕೆ ಚಿತ್ರದ ಗ್ಲಿಮ್ಸ್ ಒಂದನ್ನು ರಿಲೀಸ್ ಮಾಡಿದ್ದಾರೆ, ರಾಮ್ ಚರಣ್ ನಾಯಕನಾಗಿ ನಟಿಸುತ್ತಿದ್ದು “ಉಪ್ಪೆನ”ನಿರ್ದೇಶಕ ಬುಚ್ಚಿ ಬಾಬು ಅವರ ಎರಡನೇ ಚಿತ್ರ ಇದಾಗಿದೆ.
Also read 👉: Winter lip care tips in kannada, ಚಳಿಗಾಲದಲ್ಲಿ ಒಡೆದ ತುಟಿಗಳ ಆರೈಕೆಗೆ 8 ಅದ್ಭುತ ಟಿಪ್ಸ್ ,
ಪೆದ್ದಿ ಈ ಚಿತ್ರ ಆರಂಭದಿಂದಲೂ ಅಭಿಮಾನಿಗಳಲ್ಲಿ ಬಾರಿ ನಿರೀಕ್ಷೆಗಳನ್ನು ಮೂಡಿಸುತ್ತಾ ಬರುತ್ತಿದೆ ಈಗ ಅದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವಂತಿದೆ ಈಗ ರಿಲೀಸ್ ಆಗಿರುವ ಹೊಸ glimpse, ರಾಮಚರಣ್ ಅವರನ್ನ ಇಂದೆಂದು ನೋಡಿರದಂತ ಅತ್ಯಂತ ಮಾಸ್ ಮತ್ತು ರಗಡ್ ಲುಕ್ ನಲ್ಲಿ ಬಚ್ಚಿ ಬಾಬು ಈ ಚಿತ್ರದಲ್ಲಿ ತೋರಿಸಿದ್ದಾರೆ.
ಇನ್ನು ಹಿಂದೆ ರಿಲೀಸ್ ಆಗಿದ್ದ ಈ ಚಿತ್ರದ ತುಣುಕುಗಳನ್ನ ನೋಡಿದರೆ ಇದೊಂದು ಗ್ರಾಮೀಣ ಭಾಗದ ಕ್ರೀಡಾ ಹಿನ್ನೆಲೆ ಇರುವಂತಹ ಚಿತ್ರ ಅನಿಸುತ್ತಿತ್ತು ಆದರೆ ಚಿತ್ರದ ನಿರ್ದೇಶಕ ಇದು ಕೇವಲ ಕ್ರೀಡೆಯ ಹಿನ್ನೆಲೆ ಚಿತ್ರ ಅಲ್ಲ ಒಬ್ಬ ಯೋಧನ ಜೀವನ್ಮರಣದ ಹೋರಾಟದ ಕಥೆ ಎಂದಿದ್ದಾರೆ.
ಈ ಗ್ಲಿಂಪ್ಸ್ ನಲ್ಲಿರುವ ಡೈಲಾಗ್ “ಕುಸ್ತಿ ಅಂದ್ರೆ ಬ್ಯಾಟ್ ಹಿಡಿದು ಬಾಲ್ ಎದುರಿಸೋ ಆಟ ಅಲ್ಲ”ಜೀವನ ಕೈಲಿಡ್ದು ಸಾವನ್ನ ಎದುರಿಸುವ ಆಟ” ಎಂಬ ಡೈಲಾಗ್ಸ್ ಸಕ್ಕತ್ತಾಗಿದೆ. ಈ ಪವರ್ಫುಲ್ ಡೈಲಾಗ್ ಅಭಿಮಾನಿಗಳಿಗೆ ತುಂಬಾ ಇಷ್ಟ ಆಗಬಹುದು, ಕುಸ್ತಿ ಕ್ರಿಕೆಟ್ ಹಿನ್ನೆಲೆಯ ಈ ಪಿರಿಯಾಡಿಕ್ ಚಿತ್ರದಲ್ಲಿ ರಾಮ್ ಚರಣ್ ಪಾತ್ರ ಎಷ್ಟು ಪವರ್ ಫುಲ್ ಆಗಿರಲಿದೆ ಎಂಬುದನ್ನು ಈ ಗೇಮ್ಸ್ ನಲ್ಲಿ ನೋಡಬಹುದು.
ಈ ಚಿತ್ರಕ್ಕಾಗಿ ರಾಮ್ ಚರಣ್ ಬಾಡಿ ಟ್ರಾನ್ಸ್ಫರ್ಮೇಶನ್ ಮೇಕ್ ಓವರ್ ಎಲ್ಲವೂ ಸಕ್ಕತ್ತಾಗಿದೆ ಕುಸ್ತಿ ಅಖಾಡದಲ್ಲಿ ಬಿದ್ದು ಎದ್ದು ಮಣ್ಣಲ್ಲಿ ಕಸರತ್ತು ಮಾಡುತ್ತಾ ಕೈಯಲ್ಲಿ ಗದೆ ಹಿಡಿದು ಬರುವ ರಾಮಚರಣ್ ಅವರ ಲುಕ್ ಅದ್ಭುತವಾಗಿದೆ.
Also read 👉: ಮನೆಲ್ಲೇ Peanut Butter ಮಾಡೋದು ಹೇಗೆ? Homemade Peanut Butter Recipe in Kannada
ಇನ್ನು ಈ ಚಿತ್ರಕ್ಕೆ ಆಸ್ಕರ್ ವಿಜೇತ ಎ ಆರ್ ರೆಹಮಾನ್ ಸಂಗೀತವನ್ನು ನೀಡಿದ್ದಾರೆ, ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಈ ಚಿತ್ರದ ನಾಯಕಿಯಾಗಿದ್ದು, ಬುಚ್ಚಿ ಬಾಬು ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ, ಇದೇ ಏಪ್ರಿಲ್ 30ನೇ ತಾರೀಕು ಚಿತ್ರ ಪ್ರಪಂಚದಾದ್ಯಂತ ರಿಲೀಸ್ ಆಗಲಿದೆ.
ಇದೀಗ ರಿಲೀಸ್ ಆಗಿರುವ ಈ ಚಿತ್ರದ glimpse ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿದೆ.
ದಿನನಿತ್ಯ ಇದೇ ರೀತಿ ಉಪಯುಕ್ತ ಮಾಹಿತಿಗಾಗಿ whatsapp ಚಾನಲ್ ಅನ್ನ ಜಾಯಿನ್ ಆಗಿ 👉: https://chat.whatsapp.com/Ec3Azt7dinH7WKSmcDc4N3?mode=gi_t