ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ವರ್ಲ್ಡ್ ಚಿತ್ರ ಟಾಕ್ಸಿಕ್ ಇದೇ ಮಾರ್ಚ್ 19ರಂದು ಪ್ರಪಂಚದಾದ್ಯಂತ ರಿಲೀಸ್ ಆಗಲು ರೆಡಿಯಾಗಿತ್ತು. ಆದರೆ ಇದೀಗ ಟಾಕ್ಸಿಗೆ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್ ಆಗ್ತಿಲ್ಲ, ಬದಲಿಗೆ ಟಾಕ್ಸಿಕ್ ಸಿನಿಮಾ ಇದೀಗ ಜೂನ್ 4 ಕ್ಕೆ ರಿಲೀಸ್ ಆಗಲಿದೆ ಎಂದು ಅಧಿಕೃತವಾಗಿ ಚಿತ್ರತಂಡವೇ ಅನೌನ್ಸ್ ಮಾಡಿದೆ.
Toxic release date postpone, ಕಾರಣ?
ಮಿಡಲ್ ಲಿಸ್ಟ್ ನಲ್ಲಿ ನಡೆಯುತ್ತಿರುವಂತ ಇರಾನ್ ಇಸ್ರೇಲ್ ಮತ್ತೆ ಅಮೆರಿಕ ದೇಶಗಳ ಯುದ್ಧದ ಭೀತಿ ಮತ್ತು ಅಶಾಂತಿಯ ಪರಿಣಾಮದಿಂದ ಗಲ್ಫ್ ರಾಷ್ಟ್ರಗಳಲ್ಲಿ ಟ್ಯಾಕ್ಸಿಕ್ ಚಿತ್ರವನ್ನು ರಿಲೀಸ್ ಮಾಡಲು ಅಡಚಣೆ ಉಂಟಾಗಲಿದೆ, ಇನ್ನು ಟ್ಯಾಕ್ಸಿಕ್ ಚಿತ್ರತಂಡವು ದುಬೈ ಯುಎಇ ಕತಾರ್ ನಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವ ಯೋಜನೆಯಲ್ಲಿದೆ, ಆದರೆ ಇದೀಗ ಅಲ್ಲಿ ಯುದ್ಧದ ಪರಿಸ್ಥಿತಿ ಇರುವುದರಿಂದ ಚಿತ್ರವನ್ನ ಮುಂದೂಡುವುದಾಗಿ ನಿರ್ಮಾಪಕರಾದ ಕೆವಿಎನ್ ಪ್ರೊಡಕ್ಷನ್ ಮತ್ತೆ ಮಾಸ್ಟರ್ ಮೈಂಡ್ ಕ್ರಿಯೇಷನ್ ಸಂಸ್ಥೆ ಮತ್ತು ಯಶ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಬಗ್ಗೆ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ.
ಟ್ರೈಲರ್ ಕೂಡ ಮುಂದೂಡುವ ಸಾಧ್ಯತೆ?
ಇದೇ ಮಾರ್ಚ್ 8 ಕ್ಕೆ ಟ್ಯಾಕ್ಸಿಕ್ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಪ್ರಮೋಷನ್ ಕಾರ್ಯಗಳನ್ನ ಶುರುಮಾಡುವ ಪ್ಲಾನ್ ನಲ್ಲಿತ್ತು ಚಿತ್ರತಂಡ ಆದರೆ ಇದೀಗ ಎಲ್ಲದಕ್ಕೂ ಬ್ರೇಕ್ ಬೀಳುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇದೇ ಮಾರ್ಚ್ 19ಕ್ಕೆ ತಮ್ಮ ನೆಚ್ಚಿನ ನಟನನ್ನು ಬೆಳ್ಳಿ ಪರದೆ ಮೇಲೆ ನೋಡಿ ಅಭಿಮಾನಿಗಳು ಸಂಭ್ರಮಿಸಬೇಕಿತ್ತು.
ಇನ್ನು ಟ್ಯಾಕ್ಸಿಕ್ ಚಿತ್ರವನ್ನು ಗ್ಲೋಬಲ್ ಆಡಿಯನ್ಸ್ ಗೆ ತಲುಪಲು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಏಕಕಾಲದಲ್ಲಿ ಚಿತ್ರಿಸಲಾಗಿದೆ ಹೀಗಾಗಿ ವಿತರಕರು ಮತ್ತು ನಿರ್ಮಾಪಕರ ಸಲಹೆಯ ಮೇರೆಗೆ ಟಾಕ್ಸಿಕ್ ರಿಲೀಸ್ ಡೇಟ್ ನ ಮುಂದೂಡಲಾಗಿದೆ.
Also read:ಚಳಿಗಾಲದಲ್ಲಿ ಒಡೆದ ತುಟಿಗಳ ಆರೈಕೆಗೆ 8 ಅದ್ಭುತ ಟಿಪ್ಸ್
ಚಿತ್ರತಂಡದ ಪ್ರಕಟಣೆ 👇
Toxic : A Fairy Tale for Grown-Ups – in Cinemas Worldwide on 4 June 2026 pic.twitter.com/TlLgyzrKsF
— Yash (@TheNameIsYash) March 4, 2026
ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಎಂಬುದು ಜಾಗತಿಕ ಪ್ರೇಕ್ಷಕರಿಗಾಗಿ ಸಿನಿಮಾವನ್ನು ರಚಿಸುವ ದೃಷ್ಟಿಕೋನದಿಂದ ನಾವು ಕಲ್ಪಿಸಿಕೊಂಡ ಚಿತ್ರ. ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಚಿತ್ರೀಕರಿಸಲಾದ ಇದನ್ನು, ಮನೆಯಲ್ಲಿ ಮತ್ತು ಪ್ರಪಂಚದಾದ್ಯಂತದ ವೀಕ್ಷಕರೊಂದಿಗೆ ಸಂಪರ್ಕ ಸಾಧಿಸುವ ದೃಢನಿಶ್ಚಯದೊಂದಿಗೆ ನಿರ್ಮಿಸಲಾಗಿದೆ. ವರ್ಷಗಳ ಸಮರ್ಪಿತ ಶ್ರಮದ ನಂತರ, ಮಾರ್ಚ್ 19 ರಂದು ನಮ್ಮ ಚಿತ್ರವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾವು ಉತ್ಸುಕರಾಗಿದ್ದೇವೆ. ಆದಾಗ್ಯೂ, ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ಪ್ರಸ್ತುತ ಅನಿಶ್ಚಿತತೆಯು, ಸಾಧ್ಯವಾದಷ್ಟು ವಿಶಾಲವಾದ ಪ್ರೇಕ್ಷಕರನ್ನು ತಲುಪುವ ಮತ್ತು ಸಂಪರ್ಕಿಸುವ ನಮ್ಮ ಗುರಿಯ ಮೇಲೆ ಪರಿಣಾಮ ಬೀರುವ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಆದ್ದರಿಂದ, ನಮ್ಮ ಪಾಲುದಾರರು ಮತ್ತು ನಮ್ಮ ಪ್ರೇಕ್ಷಕರ ಹಿತದೃಷ್ಟಿಯಿಂದ, ನಮ್ಮ ಬಿಡುಗಡೆಯನ್ನು ಮರು ನಿಗದಿಪಡಿಸುವ ಕಷ್ಟಕರವಾದ ಆದರೆ ಎಚ್ಚರಿಕೆಯಿಂದ ಪರಿಗಣಿಸಲಾದ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ. ನಿಮ್ಮ ತಿಳುವಳಿಕೆ ಮತ್ತು ತಾಳ್ಮೆಗೆ ನಾವು ಧನ್ಯವಾದಗಳು ಮತ್ತು ನಿಮ್ಮ ನಿರಂತರ ಪ್ರೀತಿ ಮತ್ತು ಬೆಂಬಲವನ್ನು ಎದುರು ನೋಡುತ್ತಿದ್ದೇವೆ.
ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಈಗ ಜೂನ್ 4, 2026 ರಂದು ಪ್ರಪಂಚದಾದ್ಯಂತದ ಚಿತ್ರಮಂದಿರಗಳಲ್ಲಿ ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಸಿನಿಮಾದಲ್ಲಿ ನಿಮ್ಮನ್ನು ಭೇಟಿಯಾಗುತ್ತೇವೆ.🙏