ಪೀನಟ್ ಬೆಟರ್ ಅಂದ್ರೆ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರೂ ತುಂಬಾ ಇಷ್ಟಪಟ್ಟು ತಿನ್ನುವಂತ ಆಹಾರ ಪದಾರ್ಥ ಇದು, ಇದನ್ನ ಮನೆಯಲ್ಲೇ ತುಂಬಾ ಸುಲಭವಾಗಿ ಕೇವಲ ಮೂರು ನಾಲ್ಕು ಪದಾರ್ಥಗಳು ಇದ್ರೆ ಸಾಕು ಜಸ್ಟ್ 5 ನಿಮಿಷದಲ್ಲಿ ಹೆಲ್ತಿ ಹೋಮ್ ಮೇಡ್ ಪೀನಟ್ ಬಟರ್ ಅನ್ನ ತಯಾರಿಸಬಹುದು.
ಆದರೆ ಅದನ್ನ ಮನೆಯಲ್ಲಿ ಮಾಡೋದು ಕಷ್ಟ ಸರಿಯಾದ ರೀತಿಯಲ್ಲಿ ಬರಲ್ಲ ಅಂತ ಕೆಲವರು ಅಂಗಡಿಗಳಿಂದ ಅಥವಾ ಸೂಪರ್ ಮಾರ್ಕೆಟ್ ಗಳಿಂದ ತಗೋ ಬರ್ತಾರೆ ಆದರೆ ಒಮ್ಮೆ ಈ ರೀತಿ ಪೀನಟ್ ಬಟರ್ ಅನ್ನ ಮಾಡಲು ಟ್ರೈ ಮಾಡಿ ತುಂಬಾ ಅದ್ಭುತವಾಗಿ ಬರುತ್ತೆ.
ಆನಂತರ ಹೊರಗಿನಿಂದ ರಾಸಾಯನಿಕ ಯುಕ್ತ ಪೀನಟ್ ಬಟರ್ ತರುವ ಬದಲು, ಮನೆಯಲ್ಲೇ ನ್ಯಾಚುರಲ್ ಹೆಲ್ತಿ ಪೀನಟ್ ಬಟರ್ ತಯಾರಿಸಲು ಶುರು ಮಾಡ್ತೀರಾ! ಜೊತೆಗೆ ಮನೆಯಲ್ಲಿಯೇ ಮಾಡೋದ್ರಿಂದ ಹಣ ಕೂಡ ಸೇವ್ ಆಗುತ್ತೆ .
Homemade Peanut butter ಮಾಡೋಕೆ ಬೇಕಾಗುವ ಪದಾರ್ಥಗಳು.

• ಕಡಲೆಕಾಯಿ ಬೀಜ 1 ಕಪ್
• ಸ್ವಲ್ಪ ಉಪ್ಪು – ರುಚಿಗೆ ತಕ್ಕಷ್ಟು
• ಕಡಲೆಕಾಯಿ ಎಣ್ಣೆ/ಜೇನುತುಪ್ಪ – 2 ಸ್ಪೂನ್
ಪೀನಟ್ ಬಟರ್ ಮಾಡುವ ವಿಧಾನ ? (How to make homemade Peanut Butter Recipe)
* ಸ್ಟವ್ ಮೇಲೆ ಪಾತ್ರೆ ಇಟ್ಟು ಕಡಲೆ ಬೀಜಗಳನ್ನ ಕಂದು ಬಣ್ಣ ಬರುವವರೆಗೂ ಉರಿದುಕೊಳ್ಳಿ ಆನಂತರ ಕಡಲೆ ಬೀಜಗಳ ಸಿಪ್ಪೆಯನ್ನು ತೆಗೆದು ಒಂದು ಮಿಕ್ಸಿ ಜಾರ್ ನಲ್ಲಿ ಹಾಕಿಕೊಳ್ಳಿ.
* ಆನಂತರ ಮಿಕ್ಸಿ ಜಾರ್ ನಲ್ಲಿ ಹಾಕಿದ ಕಡಲೆ ಬೀಜಗಳನ್ನು ಒಂದು 15 ಸೆಕೆಂಡ್ ಗಳ ಕಾಲ ರುಬ್ಬಿದಾಗ ಕಡಲೆಪುಡಿಯಾಗಿ ಬದಲಾಗಿರುತ್ತೆ.
* ಇದೇ ರೀತಿ ಇನ್ನೂ ಎರಡು ಮೂರು ಬಾರಿ ರುಬ್ಬಿಕೊಳ್ಳಿ ಆಗ ಕಡಲೆ ಪುಡಿಯಲ್ಲಿನ ಎಣ್ಣೆ ಬಿಡಲು ಆರಂಭಿಸಿ ಮಿಕ್ಸಿ ಜಾರಿಗೆ ಅಂಟಿಕೊಳ್ಳಲು ಶುರುವಾಗಿರುತ್ತೆ.
* ಮಿಕ್ಸಿಯನ್ನ ಎಲ್ಲಿಯವರೆಗೂ ರುಬ್ಬಬೇಕು ಅಂದ್ರೆ ಕಡಲೆ ಪುಡಿ ಮುದ್ದೆಯ ರೀತಿ ಬದಲಾಗುವವರೆಗೂ ರುಬ್ಬಿಕೊಳ್ಳುತ್ತಾ ಬನ್ನಿ , ಕಡಲೆಕಾಯಿಯಲ್ಲಿನ ಎಣ್ಣೆ ಬಿಡಲು ಶುರುವಾಗುತ್ತೆ.
* ಒಮ್ಮೆ ಮುದ್ದೆ ಮುದ್ದೆಯ ರೀತಿ ಬದಲಾದ ನಂತರ ಅದಕ್ಕೆ ಉಪ್ಪನ್ನು ಸೇರಿಸಿ ಜಸ್ಟ್ ಹಾಗೆ ಒಂದು 10 ಸೆಕೆಂಡ್ ರುಬ್ಬಿಕೊಳ್ಳಿ ಉಪ್ಪುಚೆನ್ನಾಗಿ ಮಿಕ್ಸ್ ಆಗೋದಿಕ್ಕೆ.
* ಆನಂತರ ಕೊನೆಯದಾಗಿ 2 ಸ್ಪೂನ್ ಎಣ್ಣೆಯನ್ನು ಹಾಕಿ ಮತ್ತೆ ರುಬ್ಬಿಕೊಳ್ಳಿ ಆನಂತರ ಮುಚ್ಚಳವನ್ನು ತೆಗೆದು ನೋಡಿದ್ರೆ ಪೀನಟ್ ಬೆಟರ್ ಅದ್ಭುತವಾಗಿ ತಯಾರಾಗಿರುತ್ತೆ.
* ಈ ರೀತಿ ಹಂತ ಹಂತವಾಗಿ ಫಾಲೋ ಮಾಡಿ ತುಂಬ ಸುಲಭವಾಗಿ ಮನೆಯಲ್ಲೇ ಪರ್ಫೆಕ್ಟ್ ಪೀನಟ್ ಬಟರ್ ಅನ್ನ ಮಾಡಬಹುದು.
* ರೆಡಿಯಾದ ಪೀನಟ್ ಬಟರ್ ಅನ್ನ ಒಂದು ಬೌಲ್ ನಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ತಿಂಗಳುಗಳ ಕಾಲ ಇಟ್ಟುಕೊಳ್ಳಬಹುದು .
Also read 👉: ಚಳಿಗಾಲದಲ್ಲಿ ಒಡೆದ ತುಟಿಗಳ ಆರೈಕೆಗೆ 8 ಅದ್ಭುತ ಟಿಪ್ಸ್
ಪೀನಟ್ ಬಟರ್ ತಿನ್ನೋದ್ ಹೇಗೆ?
• ಇದನ್ನ ಬ್ರೌನ್ ಬ್ರೆಡ್ ಜೊತೆ ಕೂಡ ತಿನ್ನಬಹುದು ತುಂಬಾ ರುಚಿಯಾಗಿ ಟೇಸ್ಟಿಯಾಗಿ ಕೂಡ ಇರುತ್ತೆ.
• ಬನಾನಾ ಮತ್ತೆ ಒಂದು ಕಪ್ ಹಾಲು ಜೊತೆ ಪೀನಟ್ ಬಟರ್ ಸೇರಿಸಿ smoothies ಮಾಡಿಕೊಳ್ಳಬಹುದು.
• ಅಥವಾ ಓಟ್ಸ್ ಮಿಲ್ಕ್ ಮತ್ತೆ ಡ್ರೈ ಫ್ರೂಟ್ಸ್ ಎಲ್ಲ ಜೊತೆ ಸೇರಿಸಿ ತಿಂದರೆ ಇನ್ನೂ ಚೆನ್ನಾಗಿರುತ್ತೆ.
ಹೆಲ್ತ್ ಬೆನಿಫಿಟ್ಸ್ !
- High Protein
- Healthy Fats
- Weight Gain & Muscle Building ಮಾಡೋರಿಗೆ ಇದು ಸೂಪರ್ ಫುಡ್.
- ಮಕ್ಕಳಿಗೆ ಇದು ಎನರ್ಜಿ ಬೂಸ್ಟರ್ ಇದ್ದಂತೆ ಬೇಗ ಆಯಾಸ ಸುಸ್ತು ಆಗದಂತೆ ತಡೆಯುತ್ತೆ.
ಮುಖ್ಯವಾಗಿ ಇದನ್ನ ಮನೆಯಲ್ಲೇ ಮಾಡೋದ್ರಿಂದ ಯಾವುದೇ ರಾಸಾಯನಿಕ ಅಥವಾ ಪ್ರೀಸರ್ವೇಟಿವ್ ಗಳನ್ನ ಬಳಸೋದಿಲ್ಲ ಹೀಗಾಗಿ ಆರೋಗ್ಯಕರವಾಗಿರುತ್ತದೆ. ಪೀನಟ್ ಬಟರ್ ನ್ನು ರೆಗ್ಯುಲರಾಗಿ ತಿನ್ನುವುದರಿಂದ ದೇಹದ ಆರೋಗ್ಯವು ಕೂಡ ಉತ್ತಮವಾಗುತ್ತದೆ.