Chandra grahan 2026 : ಇವತ್ತು ಆಕಾಶದಲ್ಲಿ ಅಪರೂಪದ ಖಗೋಳ ವಿದ್ಯಮಾನ ನಡೆಯಲಿದೆ. ಇಂದು ಚಂದ್ರ ಗ್ರಹಣ ಆಗಿರುವುದರಿಂದ ಚಂದ್ರ ತಿಳಿ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳಲಿದ್ದಾನೆ, ಹಲವರು ಇದನ್ನು ಧಾರ್ಮಿಕ ದೃಷ್ಟಿಯಿಂದ ನೋಡಿದರೆ ಇನ್ನು ಕೆಲವರು ವೈಜ್ಞಾನಿಕವಾಗಿ ಕುತೂಹಲದ ದೃಷ್ಟಿಯಿಂದ ನೋಡ್ತಾರೆ, ಹಾಗಾದ್ರೆ ಈ ಚಂದ್ರಗ್ರಹಣ ಅಂದರೆ ಏನು? ಚಂದ್ರ ಗ್ರಹಣ ಯಾಕೆ ಆಗುತ್ತೆ? ಇದರಿಂದ ಏನಾದರೂ ಅಪಾಯ ಇದೆಯಾ? ಚಂದ್ರ ಗ್ರಹಣವನ್ನು ಬರಿಗಣ್ಣಿನಿಂದ ನೋಡಬಹುದ! ಈ ಗ್ರಹಣ ಭಾರತದಲ್ಲಿ ಯಾವಾಗ ಸಂಭವಿಸಲಿದೆ? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ 👇
🌙 ಚಂದ್ರ ಗ್ರಹಣ ಅಂದ್ರೆ ಏನು?
ಚಂದ್ರ ಗ್ರಹಣ ಆಗೋದು ಯಾವಾಗ ಅಂದ್ರೆ:
☀️ ಸೂರ್ಯ
🌍 ಭೂಮಿ
🌕 ಚಂದ್ರ
ಈ ಮೂರೂ ಒಂದು ಸರಳ ರೇಖೆಯಲ್ಲಿ ಬಂದಾಗ, ಚಂದ್ರ ಗ್ರಹಣ ಸಂಭವಿಸುತ್ತದೆ. ಭೂಮಿ ಸೂರ್ಯನ ಬೆಳಕನ್ನು ತಡೆದು, ಅದರ ನೆರಳು ಚಂದ್ರನ ಮೇಲೆ ಬೀಳುತ್ತದೆ. ಇದನ್ನೇ ಚಂದ್ರ ಗ್ರಹಣ ಅಂತ ಕರೆಯುತ್ತಾರೆ. ಈ ಗ್ರಹಣದ ಸಮಯದಲ್ಲಿ ಚಂದ್ರನು ಕೆಂಪು ಹೊಳೆಯುವ ರಕ್ತದ ಚಂದ್ರನಂತೆ ಕಾಣಿಸಿಕೊಳ್ಳುತ್ತಾನೆ.
ಚಂದ್ರ ಕೆಂಪಾಗಿ ಕಾಣಿಸುವುದು ಏಕೆ?
ಕೆಲವು ವೇಳೆ ಚಂದ್ರ ಸಂಪೂರ್ಣ ಕೆಂಪಾಗಿ ಕಾಣಿಸುತ್ತಾನೆ. ಇದನ್ನು “Blood Moon” ಎಂದು ಕರೆಯುತ್ತಾರೆ.
ಇದು ಭಯಾನಕ ಲಕ್ಷಣ ಅಲ್ಲ. ಭೂಮಿಯ ವಾತಾವರಣದ ಮೂಲಕ ಹಾದು ಹೋಗುವ ಸೂರ್ಯನ ಕೆಂಪು ಬೆಳಕು ಬಣ್ಣ ಮಾತ್ರ ಉಳಿದು ಅದು ಚಂದ್ರನ ಮೇಲೆ ಬೀಳುತ್ತದೆ. ಅದರಿಂದ ಚಂದ್ರ ಕೆಂಪಾಗಿ ಕಾಣುತ್ತಾನೆ ಅಷ್ಟೇ ಸೂರ್ಯನ ಬೆಳಕಿನಲ್ಲಿರುವ ಏಳು ಬಣ್ಣಗಳಲ್ಲಿ ಕೆಂಪು ಬಣ್ಣ ಅತಿ ಹೆಚ್ಚು ದೂರ ಚಲಿಸಿ ಚಂದ್ರನ ಮೇಲೆ ಬೀಳುತ್ತೆ ಇದರಿಂದ ಅಪಾಯ ಅಥವಾ ಆತಂಕ ಪಡುವ ಅಗತ್ಯ ಇಲ್ಲ.
🕒 ಭಾರತದಲ್ಲಿ ಚಂದ್ರಗ್ರಹಣದ ಸಮಯ ಯಾವಾಗ?
👉 ಗ್ರಹಣ ಆರಂಭ ಸಮಯ: 3:21 pm
👉 ಭಾರತದಲ್ಲಿ ಗ್ರಹಣ ಗೋಚರ: 6:20 pm
👉 ಗ್ರಹಣ ಅಂತ್ಯ ಸಮಯ: 6:47 pm
ಇಂದು ಮಧ್ಯಾಹ್ನ 3:21 ರಿಂದ ಸಂಜೆ 6:47 ರವರೆಗೆ ಗ್ರಹಣ ಸಂಭವಿಸಲಿದೆ. ರಾತ್ರಿ ಸಮಯ ಆಗಿರೋದ್ರಿಂದ ಈ ಗ್ರಹಣ ಭೂಮಿಯ ಎಲ್ಲಾ ಸ್ಥಳಗಳಲ್ಲೂ ನೋಡಬಹುದು. ಇನ್ನು ನಮ್ಮ ದೇಶದಲ್ಲಿ ಸಂಜೆ 6:20 ರಿಂದ 6:47 ರವರೆಗೆ ಚಂದ್ರ ಗ್ರಹಣ ಆಕಾಶದಲ್ಲಿ ಸಂಭವಿಸಲಿದೆ ಈ ಅದ್ಭುತ ಘಟನೆಯ ಅಥವಾ ಪವಾಡವು ಭಾರತದಲ್ಲಿ ಸುಮಾರು 27 ನಿಮಿಷಗಳ ಕಾಲ ಮಾತ್ರ ನೋಡಲು ಸಿಗುತ್ತೆ .
ಚಂದ್ರ ಗ್ರಹಣವನ್ನು ಹೇಗೆ ನೋಡಬೇಕು? ಮುನ್ನೆಚ್ಚರಿಕೆ ಕ್ರಮಗಳು.
ಇದು ಚಂದ್ರಗ್ರಹಣ ಆಗಿರೋದ್ರಿಂದ ನೇರವಾಗಿ ಬರಿ ಗಣ್ಣಿನಿಂದಲೇ ಸುರಕ್ಷಿತವಾಗಿ ನೋಡಬಹುದು, ಸೂರ್ಯ ಗ್ರಹಣದಂತೆ ವಿಶೇಷ ಗ್ಲಾಸ್ ಅವಶ್ಯಕತೆ ಏನು ಬೇಕಾಗಿಲ್ಲ.
ನಗರ ಪ್ರದೇಶಗಳಲ್ಲಿ ಹೆಚ್ಚಿನ ದೀಪಗಳು ಲೈಟ್ಸ್ ಇರೋದ್ರಿಂದ ಅಷ್ಟೊಂದು ಸ್ಪಷ್ಟವಾಗಿ ಕಾಣದೇ ಇರಬಹುದು ಆದರೆ ಹಳ್ಳಿಗಳಲ್ಲಿ ಆಕಾಶವು ಬಹಳ ಸ್ಪಷ್ಟವಾಗಿ ಗೋಚರಿಸುತ್ತೆ ಹೀಗಾಗಿ ನಗರ ಪ್ರದೇಶದ ಜನರು ಟೆಲಿಸ್ಕೋಪ್ ಅಥವಾ ಬೈನಾಕ್ಯುಲರ್ ಬಳಸಿ ಇನ್ನಷ್ಟು ಸ್ಪಷ್ಟವಾಗಿ ನೋಡಬಹುದು.
ಅಥವಾ ಮೊಬೈಲ್ ಕ್ಯಾಮೆರಾ DSLR ಕ್ಯಾಮರಾ ಗಳಿಂದ ಈ ಸುಂದರ ಕ್ಷಣವನ್ನು ಸೆರೆಹಿಡಿಯಬಹುದು ಫೋಟೋವನ್ನು ತೆಗಿಬಹುದು.
ಧಾರ್ಮಿಕ ನಂಬಿಕೆಗಳು ಮತ್ತು ಸಂಪ್ರದಾಯಗಳು?
ಈ ಗ್ರಹಣದ ಸಮಯದಲ್ಲಿ ಭಾರತದಲ್ಲಿ ಹಲವಾರು ರೀತಿಯ ಆಚಾರಗಳು ಮತ್ತು ಸಂಪ್ರದಾಯಗಳು ಇವೆ.
*ದೇವಸ್ಥಾನಗಳನ್ನ ಮುಚ್ಚುವುದು.
*ಇನ್ನು ಕೆಲವರು ಆಹಾರ ಸೇವನೆಯನ್ನು ಮಾಡಲ್ಲ.
*ಮುಖ್ಯವಾಗಿ ಗರ್ಭಿಣಿಯರು ಹೊರಗೆ ಹೋಗಬಾರದು ಮತ್ತೆ ಎಚ್ಚರಿಕೆಯಿಂದ ಇರುವಂತೆ ಹೇಳುತ್ತಾರೆ.
ಈಗೇ ಇನ್ನೂ ಹಲವಾರು ಸಂಪ್ರದಾಯಗಳು ಭಾರತದಲ್ಲಿವೆ, ಇವು ಸಂಪ್ರದಾಯದ ಭಾಗ. ಆದರೆ ವೈಜ್ಞಾನಿಕವಾಗಿ ಚಂದ್ರ ಗ್ರಹಣವು ಸಹಜ ಖಗೋಳ ಘಟನೆ, ಇದರಿಂದ ಯಾವುದೇ ಸಮಸ್ಯೆ ಇಲ್ಲ.
ಚಂದ್ರ ಗ್ರಹಣ ಒಂದು ಪ್ರಕೃತಿಯ ಅದ್ಭುತ ದೃಶ್ಯ. ಭಯಪಡುವ ಅಗತ್ಯ ಇಲ್ಲ. ವೈಜ್ಞಾನಿಕವಾಗಿ ತಿಳಿದು, ಸಂಪ್ರದಾಯಗಳನ್ನು ಗೌರವಿಸಿ, ಈ ಅಪರೂಪದ ಕ್ಷಣವನ್ನು ಆನಂದಿಸಿ.