T20 World cup 2026 Final: ಫೈನಲ್ ಮ್ಯಾಚ್ ಆರಂಭವಾಗಿದೆ ಮೈದಾನಕ್ಕೆ ಕಪ್ಪನ್ನ ಹಿಡಿದು ಬಂದಂತ ಈ ಹಿಂದಿನ ವಿನ್ನಿಂಗ್ ಕ್ಯಾಪ್ಟನ್ ಗಳಾದ ಧೋನಿ ಮತ್ತೆ ರೋಹಿತ್, ಮ್ಯಾಚ್ ಗೆ ಚಾಲನೆ ನೀಡಿದರು. ಇನ್ನು 2007ರಲ್ಲಿ ಧೋನಿ ಟಿ20 ವಿಶ್ವಕಪ್ ಅನ್ನು ಗೆಲ್ಲಿಸಿದ್ರು ಆನಂತರ 2024 ರಲ್ಲಿ ರೋಹಿತ್ ಕ್ಯಾಪ್ಟನ್ ಶಿಪ್ ನಲ್ಲಿ ಟಿ-20 ವಿಶ್ವಕಪ್ ಅನ್ನ ಭಾರತದ ಗೆದ್ದಿತು ಅದಾದ ನಂತರ ಇದೀಗ 2026ರಲ್ಲಿ ಮತ್ತೆ ಭಾರತ ಫೈನಲ್ ಗೆ ತಲುಪಿದೆ.
ಈ ಮ್ಯಾಚ್ ಗುಜರಾತ್ನ ಅಹ್ಮದಾಬಾದ್ ನಲ್ಲಿ ನಡೆಯುತ್ತಿದ್ದು ಭಾರತ ಟಾಸ್ ಸೋತಿದೆ, ಟಾಸ್ ಗೆದ್ದಂತ ನ್ಯೂಜಿಲೆಂಡ್ ಕ್ಯಾಪ್ಟನ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಭಾರತ ಬ್ಯಾಟಿಂಗ್ ಆರಂಭಿಸಿದೆ.
Also read 👇: ಮನೆಲ್ಲೇ Peanut Butter ಮಾಡೋದು ಹೇಗೆ? Homemade Peanut Butter Recipe in Kannada
ಕಣಕ್ಕಿಳಿದ ಅಭಿಷೇಕ್ ಮತ್ತೆ ಸಂಜು ಸ್ಯಾಮ್ಸನ್.
ಕಳೆದ ಮ್ಯಾಜಿನಲ್ಲಿ ಕಳಪೆ ಪ್ರದರ್ಶನ ನೀಡಿದಂತಹ ಅಭಿಷೇಕ್ ಇದೀಗ ಫೈನಲ್ ನಲ್ಲಿ ಮತ್ತೆ ಫಾರ್ಮ್ ಗೆ ಬಂದಿದ್ದು ಕೇವಲ 18 ಬಾಲ್ಗಳಿಗೆ ಅರ್ಧ ಶತಕವನ್ನು ಬಾರಿಸಿದ್ದಾರೆ ಇದು ಈ ಟೂರ್ನಿಯ ಫಾಸ್ಟೆಸ್ಟ್ ಆಪ್ ಸೆಂಚುರಿ.
*ಇನ್ನು ಸಂಜು ಸಾಮ್ಸನ್ ಕೂಡ ಉತ್ತಮವಾಗಿ ಆಟ ಆಡ್ತಿದ್ದು 24 ಬಾಲ್ಗೆ 40 ರನ್ಗಳನ್ನ ಪೂರೈಸಿದ್ದಾರೆ.
ಇದೀಗ ಟೀಮ್ ಇಂಡಿಯಾ 9 ಓವರ್ ಗಳಿಗೆ 115 ರನ್ಗಳನ್ನು ಪೂರೈಸಿದೆ.
ಇತಿಹಾಸವನ್ನು ಸುಳ್ಳು ಮಾಡುತ್ತಾ ಟೀಮ್ ಇಂಡಿಯಾ!
ಯಾಕಂದ್ರೆ ಫೈನಲ್ ನಲ್ಲಿ ಯಾರು ಟಾಸ್ ವಿನ್ ಆಗ್ತಾರೆ ಅದೇ ಟೀಮ್ ಕಳೆದ 16 ವರ್ಷಗಳಲ್ಲಿ ಫೈನಲ್ ಮ್ಯಾಚ್ ಅನ್ನ ಗೆದ್ದಿರುವಂತ ಇತಿಹಾಸ ಇದೆ, 2010 ರ T20 World Cup final ನಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾವನ್ನು ಸೋಲಿಸಿ ಕಪ್ ಗೆದ್ದಿತು. ನಂತರ 2012 ರಲ್ಲಿ, ವೆಸ್ಟ್ ಇಂಡೀಸ್ ಫೈನಲ್ನಲ್ಲಿ ಟಾಸ್ ಗೆದ್ದು ಶ್ರೀಲಂಕಾವನ್ನು ಸೋಲಿಸಿ ಕಪ್ ಗೆದ್ದಿತು.
2014 ರಲ್ಲಿ, ಶ್ರೀಲಂಕಾ ಟಾಸ್ ಗೆದ್ದು ಭಾರತವನ್ನು ಫೈನಲ್ನಲ್ಲಿ ಸೋಲಿಸಿತು. 2016 ರಲ್ಲಿ, ವೆಸ್ಟ್ ಇಂಡೀಸ್ ಟಾಸ್ ಗೆದ್ದು ಫೈನಲ್ನಲ್ಲಿ ಇಂಗ್ಲೆಂಡ್ ಅನ್ನು ಸೋಲಿಸಿತು. 2021 ರಲ್ಲಿ, ಆಸ್ಟ್ರೇಲಿಯಾ ಟಾಸ್ ಗೆದ್ದು ಫೈನಲ್ನಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿತು. 2022 ರಲ್ಲಿ, ಇಂಗ್ಲೆಂಡ್ ಟಾಸ್ ಗೆದ್ದು ಫೈನಲ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿತು. 2024 ರಲ್ಲಿ, ಭಾರತ ಟಾಸ್ ಗೆದ್ದು ಫೈನಲ್ನಲ್ಲಿ ಕಪ್ ಗೆದ್ದಿತು.
ಹೀಗಾಗಿ ಈ ಬಾರಿ ಟಾಸ್ ವಿನ್ ಆಗಿರುವಂತ ನ್ಯೂಜಿಲ್ಯಾಂಡ್ ಅನ್ನ ಮಣಿಸಿ ಭಾರತ ಇತಿಹಾಸವನ್ನು ಅಳಿಸಿ ಹಾಕುವ ಮೂಲಕ ಭಾರತ 2026ರ ಟಿ20 ವಿಶ್ವಕಪ್ ಅನ್ನು ಗೆಲ್ಲಲಿ ಎಂಬುದು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಆಶಯ.
ಇದೇ ರೀತಿ ಉಪಯುಕ್ತ ಮಾಹಿತಿಗಾಗಿ ವಾಟ್ಸಾಪ್ ಚಾನೆಲ್ ನ ಜಾಯಿನ್ ಆಗಿ:👇 https://chat.whatsapp.com/EoYDSsGPuCfJnbXuAodA0w?mode=gi_t