
ನಾಳೆಯಿಂದ ರಾಜ್ಯದಂತ SSLC exam ಆರಂಭವಾಗಲಿವೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಹೊರಡುವ ಮುನ್ನ ತಯಾರಿಕೆ ಹೇಗಿರಬೇಕು ಏನೆಲ್ಲಾ ವಸ್ತುಗಳನ್ನು ತಗೊಂಡು ಹೋಗಬೇಕು ಏನೆಲ್ಲ ತಗೊಂಡು ಹೋಗಬಾರದು ಮತ್ತೆ ಎಷ್ಟೊತ್ತಿಗೆ ಪರೀಕ್ಷೆ ಆರಂಭವಾಗುತ್ತೆ ಎಸ್ ಎಲ್ ಸಿ ಪರೀಕ್ಷೆಯ ವೇಳಾಪಟ್ಟಿ ಮತ್ತು ಪರೀಕ್ಷೆಗೆ ಯಾವ ರೀತಿ ತಯಾರಿ ಮಾಡಬೇಕು ಅದರ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿಯೋಣ ಬನ್ನಿ.
ನಾಳೆಯಿಂದ SSLC exam ಗಳ ಹಬ್ಬ ಶುರು ಸುಮಾರು 9 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಪರೀಕ್ಷೆ ಆರಂಭ. ವಿದ್ಯಾರ್ಥಿಗಳಿಗಿಂತ ಹೆಚ್ಚಾಗಿ ಅವರ ಪೇರೆಂಟ್ಸ್ ಪೋಷಕರಲ್ಲಿ ಹೆಚ್ಚಿನ ಆತಂಕ ಮನೆ ಮಾಡಿರುತ್ತೆ ಹೀಗಾಗಿ ವಿದ್ಯಾರ್ಥಿಗಳೇ ನೀವು ಪರೀಕ್ಷಾ ಕೇಂದ್ರಗಳಿಗೆ ಹೊರಡುವ ಮುನ್ನ ಈ ನಿಯಮಗಳನ್ನು ಮರೆಯಬೇಡಿ!
Also read:👉 ಮನೆಲ್ಲೇ Peanut Butter ಮಾಡೋದು ಹೇಗೆ? Homemade Peanut Butter Recipe in Kannada
📌 ಪರೀಕ್ಷಾ ವೇಳಾಪಟ್ಟಿ ಮತ್ತು ಸಮಯ:👇
ನಾಳೆ ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆಯೊಂದಿಗೆ ಆರಂಭವಾಗಿ ಏಪ್ರಿಲ್ 2 ರವರೆಗೆ ಪರೀಕ್ಷೆಗಳು ನಡೆಯಲಿವೆ.
* 1 ಗಂಟೆ ಮುಂಚಿತವಾಗಿಯೇ ಪರೀಕ್ಷಾ ಕೇಂದ್ರಕ್ಕೆ ಹೊಗಿ
* ವರದಿ ಮಾಡುವ ಸಮಯ: ವಿದ್ಯಾರ್ಥಿಗಳು ಬೆಳಿಗ್ಗೆ 9:45ಕ್ಕೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು.
* ಓದಲು ಸಮಯ: 10:00 ರಿಂದ 10:15 ರವರೆಗೆ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
* ಪರೀಕ್ಷಾ ಸಮಯ: ಬೆಳಿಗ್ಗೆ 10:15 ರಿಂದ ಮಧ್ಯಾಹ್ನ 1:30 ರವರೆಗೆ.
* ಬೆಳಗ್ಗೆ 10:30 ನಂತರ ಬಂದರೆ ಪರೀಕ್ಷಾ ಕೊಠಡಿಗೆ ಪ್ರವೇಶ ಇರುವುದಿಲ್ಲ.
- ಹೆಚ್ಚಿನ ಗ್ಯಾಪ್: ವಿಜ್ಞಾನ ಪರೀಕ್ಷೆಗೆ (4 ದಿನಗಳು).
- ಕಡಿಮೆ ಗ್ಯಾಪ್: ದ್ವಿತೀಯ ಮತ್ತು ತೃತೀಯ ಭಾಷೆಗಳಿಗೆ (ತಲಾ 1 ದಿನ).
ಸಲಹೆ: ವಿಜ್ಞಾನ ಮತ್ತು ಗಣಿತಕ್ಕೆ ಹೆಚ್ಚಿನ ಗ್ಯಾಪ್ ಇರುವುದರಿಂದ, ಆ ದಿನಗಳನ್ನು ಪೂರ್ಣ ಪ್ರಮಾಣದ ರಿವಿಷನ್ ಮಾಡಲು ಬಳಸಿಕೊಳ್ಳಿ.
ವಿದ್ಯಾರ್ಥಿಗಳ ಗಮನಕ್ಕೆ: ಇವು ಕಡ್ಡಾಯ ನಿಯಮಗಳು.
* ಹಾಲ್ ಟಿಕೆಟ್ ಕಡ್ಡಾಯ: ಮೂಲ ಪ್ರವೇಶ ಪತ್ರ (Hall Ticket) ಇಲ್ಲದೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶವಿರುವುದಿಲ್ಲ.
* ಡ್ರೆಸ್ಕೋಡ್: ಎಲ್ಲಾ ವಿದ್ಯಾರ್ಥಿಗಳು ತಮ್ಮ ಶಾಲೆಯ ಅಧಿಕೃತ ಸಮವಸ್ತ್ರವನ್ನು (Uniform) ಧರಿಸುವುದು ಕಡ್ಡಾಯವಾಗಿದೆ.
* ನಿಷೇಧಿತ ವಸ್ತುಗಳು: ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಪರೀಕ್ಷಾ ಕೇಂದ್ರದ ಒಳಗೆ ತರುವಂತಿಲ್ಲ.
* ಉಚಿತ ಬಸ್ ಪ್ರಯಾಣ: ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಮ್ಮ ಹಾಲ್ ಟಿಕೆಟ್ ತೋರಿಸಿ ಕೆಎಸ್ಆರ್ಟಿಸಿ (KSRTC) ಮತ್ತು ಬಿಎಂಟಿಸಿ (BMTC) ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
ಪೋಷಕರ ಗಮನಕ್ಕೆ: ಆತಂಕ ಬೇಡ.
* ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.
* ಎಲ್ಲಾ ತರಗತಿಗಳಲ್ಲೂ ಸಿಸಿಟಿವಿಯ ಕಣ್ಗಾವಲು ಇರುತ್ತದೆ.
* ಯಾವುದೇ ರೀತಿಯ ವದಂತಿಗಳಿಗೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿಗಳ ಬಗ್ಗೆ ಕಿವಿಗೊಡಬೇಡಿ.
ವಿದ್ಯಾರ್ಥಿಗಳೇ ಪರೀಕ್ಷೆ ಹಿಂದಿನ ದಿನವೇ ಸಿದ್ಧರಾಗಿ.
ನಾಳೆಯೇ ಪರೀಕ್ಷೆ ಆಗಿರುವುದರಿಂದ ಸಾಮಾನ್ಯವಾಗಿ ಆತಂಕ ಹೆಚ್ಚಾಗಿರುತ್ತೆ ಆತಂಕ ಪಡುವ ಬದಲು ರಾತ್ರಿಯೇ ಎಲ್ಲಾ ಸಿದ್ಧತೆಯನ್ನ ಮಾಡಿಕೊಳ್ಳಿ ಈಗಾಗಲೇ
* ಓದದೇ ಇರುವ ಚಪ್ಟರ್ ಗಳನ್ನು ಬಿಟ್ಟು ನೀವು ಓದಿರುವುದನ್ನು ಮತ್ತೆ ರಿವಿಶನ್ ಮಾಡಿಕೊಳ್ಳಿ.
* ಪೂರ್ವ ಸಿದ್ಧತಾ ಪರೀಕ್ಷೆಗಳ (preparatory) ಪೇಪರ್ ಗಳು ಮತ್ತೆ ನಾಲ್ಕೈದು ವರ್ಷದ ಹಳೆಯ ಕೋಶನ್ ಪೇಪರ್ ಗಳನ್ನು ಅದೇ ಕ್ವೆಶ್ಚನ್ ಗಳು ರಿಪೀಟ್ ಆಗುವ ಸಾಧ್ಯತೆ ಇರುತ್ತೆ
* ಎಲ್ಲ ಚಾಪ್ಟರ್ ಗಳನ್ನು ಕವರ್ ಮಾಡಬೇಕು ಅನ್ನೋ ಚಿಂತೆ ಬಿಟ್ಟು ಹಳೆ ಕೋಶನ್ ಪೇಪರ್ ಗಳನ್ನು ಪ್ರಾಕ್ಟೀಸ್ ಮಾಡಿ.
* ಆತಂಕಕ್ಕೆ ಒಳಗಾಗದೆ ಶಾಂತಚಿತ್ತದಿಂದ ಪರೀಕ್ಷೆ ಬರೆಯಿರಿ. ಇಂದು ರಾತ್ರಿ ಎಲ್ಲಾ ಅಗತ್ಯ ಸಾಮಗ್ರಿಗಳನ್ನು (ಪೆನ್, ಪೆನ್ಸಿಲ್, ಹಾಲ್ ಟಿಕೆಟ್) ಸಿದ್ಧಪಡಿಸಿಟ್ಟುಕೊಳ್ಳಿ.
ಎಲ್ಲರಿಗೂ ಶುಭವಾಗಲಿ ಆಲ್ ದಿ ಬೆಸ್ಟ್.👍
ಇದೇ ರೀತಿ ಉಪಯುಕ್ತ ಮಾಹಿತಿಗಳಿಗಾಗಿ ವಾಟ್ಸಾಪ್ ಚಾನೆಲ್ ಜಾಯಿನ್ ಆಗಿ 👇: https://chat.whatsapp.com/Ec3Azt7dinH7WKSmcDc4N3?mode=gi_t
2026 ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ಮಾರ್ಚ್ 18, 2026 ರಿಂದ ಆರಂಭವಾಗಲಿವೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಬೆಳಗ್ಗೆ 10.30ರ ನಂತರ ಬಂದಲ್ಲಿ ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಅವಕಾಶವಿರುವುದಿಲ್ಲ.
The SSLC Exam-1 of 2026 will… pic.twitter.com/bNboGdpoY8
— School Education & Literacy Department Karnataka (@ShalaShikshana) March 17, 2026