
Gas booking new rules : ನಿಮ್ಮ ಮನೆಯಲ್ಲಿ LPG ಗ್ಯಾಸ್ ಸಿಲಿಂಡರ್ ಬಳಸುತ್ತೀರಾ? ಹಾಗಾದ್ರೆ ಈ ಸುದ್ದಿ ನಿಮಗೆ ತುಂಬಾ ಮುಖ್ಯ!
ಇರಾನ್ ಅಮೇರಿಕಾ ಮತ್ತೆ ಇಸ್ರೇಲ್ ನಡುವಿನ ಯುದ್ಧದ ಎಫೆಕ್ಟ್ ಇದೀಗ ಭಾರತದ ಅಡುಗೆ ಮನೆಗಳನ್ನು ತಲುಪಿದೆ, ಇಷ್ಟು ದಿನ ಯಾವಾಗ್ ಅಂದ್ರೆ ಯಾವಾಗ ಗ್ಯಾಸ್ ಸಿಲೆಂಡರ್ ಬುಕ್ ಮಾಡಬಹುದಿತ್ತು ಆದರೆ ಇನ್ಮುಂದೆ ಆ ರೀತಿ ಸಾಧ್ಯವಿಲ್ಲ.
ಇರಾನ್ ಮತ್ತು ಇಸ್ರೇಲ್ ಯುದ್ಧದಿಂದ ಅಡುಗೆ ಅನಿಲದ ಕೊರತೆ ಉಂಟಾಗಿದೆ ಅದನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ LPG ಗ್ಯಾಸ್ ಬುಕ್ಕಿಂಗ್ಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಘೋಷಿಸಿದೆ.
ಹಾಗಾದರೆ ಈ ಹೊಸ ನಿಯಮದಲ್ಲಿ ಏನಿದೆ! ಎಷ್ಟು ದಿನಗಳ ನಂತರ ಬುಕ್ ಮಾಡಬೇಕು? ಇದರಿಂದ ಜನರ ಮೇಲೆ ಏನು ಪರಿಣಾಮ ಆಗುತ್ತೆ ಅನ್ನೋದನ್ನ ನೋಡೋಣ ಬನ್ನಿ.
🤔 ಏನಿದು ಹೊಸ ರೂಲ್ಸ್? Gas booking new rules
📌 ಸರ್ಕಾರ ಗ್ಯಾಸ್ ಬುಕಿಂಗ್ ನಡುವಿನ ಅವಧಿಯನ್ನ 21 ದಿನದಿಂದ 25 ದಿನಕ್ಕೆ ಹೆಚ್ಚಿಸಿದೆ.
* ಒಂದು ಸಿಲಿಂಡರ್ ಬುಕ್ಕಿಂಗು ಮತ್ತೊಂದು ಸಿಲಿಂಡರ್ ಬುಕ್ಕಿಂಗು 25 ದಿನ ಕಡ್ಡಾಯ ಗ್ಯಾಪ್ ಇರ್ಲೇಬೇಕು ಅನ್ನೋದು ಈ ಹೊಸ ರೂಲ್.
* ಇರಾನ್ ಇಸ್ರೇಲ್ ಯುದ್ಧದಿಂದ ಗ್ಯಾಸ್ ಸಿಲೆಂಡರ್ ಬುಕ್ಕಿಂಗೆ ಅವಧಿಯನ್ನು ಹಾಕಲಾಯಿತು, ಗ್ಯಾಸ್ ಸಿಲಿಂಡರ್ ಡೆಲಿವರಿ ಆದ 21 ದಿನಗಳ ನಂತರ ಮತ್ತೊಂದು ಸಿಲಿಂಡರ್ ನ ಬುಕ್ ಮಾಡಬಹುದಿತ್ತು. ಆದರೆ ಈಗ ಆ ಅವಧಿಯನ್ನು 25 ದಿನಗಳಿಗೆ ಹೆಚ್ಚಿಸಲಾಗಿದೆ.
🏛️ ಸರ್ಕಾರ ಈ ಹೊಸ ರೂಲ್ಸ್ ತಂದಿದ್ದು ಏಕೆ?
ದೇಶದಲ್ಲಿ LPG ಸಿಲೆಂಡರ್ ಕೊರತೆ ಉಂಟಾಗಬಹುದು ಅನ್ನು ಸುದ್ದಿ ಕೇಳಿ.
* ಸಾಮಾನ್ಯವಾಗಿ ಜನರು ಅಗತ್ಯಕ್ಕಿಂತ ಹೆಚ್ಚಿನ ಗ್ಯಾಸ್ ಗಳನ್ನು ಬುಕ್ ಮಾಡುತ್ತಿದ್ದರು.
* ಮತ್ತೆ ಸಿಲಿಂಡರ್ ಗಳನ್ನು ಸ್ಟೋರ್ ಮಾಡುವುದಕ್ಕೆ ಶುರು ಮಾಡಿಕೊಂಡಿದ್ದಾರೆ.
* ಬ್ಲಾಕ್ ಮಾರ್ಕೆಟ್ ನ ಹಾವಳಿಯನ್ನು ತಪ್ಪಿಸಲು
* ಇದರಿಂದ LPG ಸಿಲಿಂಡರ್ ಕೊರತೆ ಉಂಟಾಗಬಾರದು ಅನ್ನೋ ದೃಷ್ಟಿಯಿಂದ ಸರ್ಕಾರ ಈ ರೂಲ್ಸ್ ತಂದಿದೆ.
Also read 👉: ಮನೆಲ್ಲೇ Peanut Butter ಮಾಡೋದು ಹೇಗೆ? Homemade Peanut Butter Recipe in Kannada
🏨 ಹೋಟೆಲ್ ಗಳು ಬಂದ್ ಆಗುವ ಸಾಧ್ಯತೆ?😲
*ಕಮರ್ಷಿಯಲ್ ಗ್ಯಾಸ್ ಮತ್ತೆ ಬ್ಲಾಕ್ ಮಾರ್ಕೆಟ್ ನಲ್ಲಿ ಸಿಲಿಂಡರ್ಗಳ ಸಮಸ್ಯೆ ಎದುರಾದರೆ ಮೊದಲು ಎಫೆಕ್ಟ್ ಆಗೋದೇ ಹೋಟೆಲ್ ಇಂಡಸ್ಟ್ರಿ ಹೀಗಾಗಿ ದೇಶಾದ್ಯಂತ ಹೋಟೆಲ್ಗಳು ಬಂದ್ ಆಗುವ ಸಾಧ್ಯತೆ ಹೆಚ್ಚಿದೆ.
* ಹೋಟೆಲ್ ಆಹಾರದ ಬೆಲೆ ಏರಿಕೆ ಸಾಧ್ಯತೆ.
* ಇನ್ನು ಮನೆಯಲ್ಲಿ ಗ್ಯಾಸ್ ಖಾಲಿ ಆಗಿದೆ ಅಂತ ಹೋಟೆಲ್ ಗೆ ಹೋದ್ರೆ ಹೋಟೆಲ್ ಬಿಲ್ ನೋಡಿ ಶಾಕ್ ಆಗಬಹುದು.
* ಗ್ಯಾಸ್ ಸಿಲೆಂಡರ್ ಬುಕ್ ಮಾಡಿದ್ರು ಕೂಡ ಬರೋದಿಕ್ಕೆ ಹೆಚ್ಚು ದಿನ 6-7 ದಿನ ಆಗಬಹುದು, ಇದರಿಂದ ದೊಡ್ಡ ಕುಟುಂಬಗಳಿಗೆ ಸಮಸ್ಯೆ.
* ಎಲ್ಲೋ ನಡೆಯೋ ಒಂದು ಯುದ್ಧ ಇನ್ನೆಲ್ಲೋ ಇರುವಂತಹ ದೇಶಕ್ಕೆ ಜನರಿಗೆ ಯಾವ ರೀತಿ ಪರಿಣಾಮ ಬೀರುತ್ತದೆ ನೋಡಿ.
🛢️ LPG ಕೊರತೆ ತಡೆಯಲು ಸರ್ಕಾರ ದೊಡ್ಡ ಪ್ಲಾನ್!
*ಆಯಿಲ್ ರಿಫೈನರಿ ಕಂಪನಿಗಳಿಗೆ LPG ಉತ್ಪಾದನೆಯನ್ನು ಹೆಚ್ಚಿಸಲು ಆದೇಶಿಸಿದೆ.
* ವಾಣಿಜ್ಯ ಸಿಲಿಂಡರ್ ಗಿಂತ ಮನೆ ಬಳಕೆ ಗ್ಯಾಸ್ ಗೆ ಮೊದಲ ಆದ್ಯತೆ ನೀಡಲು ಸೂಚಿಸಿದೆ.
* ಮೊದಲು ಮನೆ ಬಳಕೆ, ನಂತರ ವಾಣಿಜ್ಯ ಬಳಕೆ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ ದೇಶದಲ್ಲಿನ ಸಾಮಾನ್ಯ ಜನರಿಗೆ ಅಡುಗೆ ಅನಿಲದ ಕೊರತೆ ಉಂಟಾಗದಂತೆ ನೋಡಿಕೊಳ್ಳೋದು ಸರ್ಕಾರದ ಗುರಿ.
* ಹೀಗಾಗಿ ಕೇವಲ ಗಲ್ಫ್ ರಾಷ್ಟ್ರಗಳ ಮೇಲೆ ಆಧಾರ ಪಡದೆ ಅಲ್ಜೀರಿಯ ಆಸ್ಟ್ರೇಲಿಯಾ ಕೆನಡಾ ಹೀಗೆ ಇನ್ನಿತರ ದೇಶಗಳಿಂದ LPG ಗ್ಯಾಸ್ ಅನ್ನು ಆಮದು ಮಾಡಿಕೊಳ್ಳಲು ಭಾರತ ಮಾತುಕತೆ ನಡೆಸುತ್ತಿದೆ ಇದರಿಂದ ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಗ್ಯಾಸ್ ಏಜೆನ್ಸಿಗಳು ಏನ್ ಹೇಳ್ತಿದ್ದಾರೆ?
ದೇಶದ ಪ್ರಮುಖ ಗ್ಯಾಸ್ ಏಜೆನ್ಸಿ ಕಂಪನಿಗಳ ಪ್ರಕಾರ ಸದ್ಯಕ್ಕೆ ಭಯ, ಆತಂಕ ಪಡುವಂತ ಅಗತ್ಯ ಇಲ್ಲ ಇನ್ನು ಕೆಲವು ದಿನ ಸರಿದೂಗಿಸುವಷ್ಟು ಸ್ಟಾಕ್ ಸ್ಟಾಕ್ ಇದೆ.
ಇದು ಕೇವಲ ಬ್ಲಾಕ್ಕಂ ಮಾರ್ಕೆಟ್ ನ ಕಂಟ್ರೋಲ್ ಮಾಡೋದಿಕ್ಕೆ ಮತ್ತು ಜನರು ಅಗತ್ಯಕ್ಕಿಂತ ಹೆಚ್ಚಿನ ಬುಕ್ಕಿಂಗನ್ನ ತಡೆಯಲು ಈ ನಿಯಮಗಳನ್ನು ಜಾರಿ ಮಾಡಿದ್ದಾರೆ.
ಇದೇ ರೀತಿ ಉಪಯುಕ್ತ ಮಾಹಿತಿಗಳಿಗಾಗಿ ವಾಟ್ಸಾಪ್ ಚಾನೆಲ್ ಜಾಯಿನ್ ಆಗಿ 👉: https://whatsapp.com/channel/0029VahDyqI47Xe4swzdSY3p