IPL 2026 ಆರಂಭದ ಮ್ಯಾಚ್ ನಲ್ಲಿ RCB ಘನ ವಿಜಯವನ್ನು ಸಾಧಿಸಿದೆ. ನೆನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲೇ SRH ವಿರುದ್ಧ 6 ವಿಕೆಟ್ಗಳ ಅಂತರದ ಭರ್ಜರಿ ಗೆಲುವನ್ನು ದಾಖಲಿಸಿದೆ.
ಅನುಷ್ಕಾ ಶರ್ಮಗೆ ಫ್ಲೈಯಿಂಗ್ ಕಿಸ್ 😘!
ಪಂದ್ಯದ ಕೊನೆಯಲ್ಲಿ 6,4,4,4 ಬಾರಿಸುವ ಮೂಲಕ ಮ್ಯಾಚ್ ಗೆಲ್ಲಿಸಿದ ವಿರಾಟ್ ಕೊಹ್ಲಿ ತಾನು ಚೇಸಿಂಗ್ ಮಾಸ್ಟರ್ ಅನ್ನೋದನ್ನ ಮತ್ತೊಮ್ಮೆ ಪ್ರೂವ್ ಮಾಡಿದರು. ಆನಂತರ ಕೊನೆಯಲ್ಲಿ ಮೈದಾನದಲ್ಲಿ ನಿಂತು ತನ್ನ ಹೆಂಡತಿ ಅನುಷ್ಕಾ ಶರ್ಮಗೆ ಪ್ಲೈ ಕಿಸ್ ಕೊಟ್ಟು ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದರು.
Also read 👉: Winter lip care tips in kannada, ಚಳಿಗಾಲದಲ್ಲಿ ಒಡೆದ ತುಟಿಗಳ ಆರೈಕೆಗೆ 8 ಅದ್ಭುತ ಟಿಪ್ಸ್ ,
ಹೋ…. ಎಂದ ಅಭಿಮಾನಿಗಳು📣
IPL 2026 RCB vs SRH: ಮೊದಲ ಪಂದ್ಯವನ್ನು ಗೆದ್ದ ಖುಷಿಯಲ್ಲಿ ವಿರಾಟ್ ಕೊಹ್ಲಿ ಸ್ಟೇಡಿಯಂ ನಲ್ಲಿ ಇದ್ದಂತ ತನ್ನ ಹೆಂಡತಿ ಅನುಷ್ಕಾ ಶರ್ಮ ಗೆ ಪ್ಲೈ ಕಿಸ್ ಕೊಟ್ರು ಇದನ್ನು ನೋಡಿದಂತ ಅಭಿಮಾನಿಗಳು ಜೋರಾಗಿ ಕೂಗು ಮೂಲಕ ಸ್ಪಂದಿಸಿದರು, ಸ್ಮೃತಿ ಮಂದಣ್ಣ, ಅನನ್ಯ ಬಿರ್ಲಾ ಕೂಡ ಅನುಷ್ಕಾ ಶರ್ಮಾ ಪಕ್ಕದಲ್ಲೇ ಇದ್ರು.
ಪಂದ್ಯಕ್ಕೂ ಮುನ್ನ 11 ಫ್ಯಾನ್ಸ್ ಗಳಿಗೆ ಮೌನಚರಣೆ💔
ಪಂದ್ಯದ ಆರಂಭಕ್ಕೂ ಮುನ್ನ ಕಳೆದ ಸೀಸನ್ ನಲ್ಲಿ ಆರ್ಸಿಬಿ ಕಪ್ ಗೆದ್ದು ಸಂಭ್ರಮ ಮಾಡುವಂತ ಟೈಮ್ ನಲ್ಲಿ ಏನು 11 ಜನ ಫ್ಯಾನ್ಸ್ ಸಾವನಪ್ಪಿದ್ರು. ಹೀಗಾಗಿ ಅವರ ಸಾವಿಗೆ ಎರಡು ನಿಮಿಷ ಮೌನಚರಣೆ ಮಾಡಲಾಯಿತು.
Srh ತಂಡಕ್ಕೆ ಆಸರೆಯಾದ ಈಶಾನ ಕಿಶನ್💪
ಮ್ಯಾಚ್ ಆರಂಭಕ್ಕೂ ಮೊದಲು srh ಟೀಮ್ 250+ ರನ್ ಕಲೆ ಹಾಕಿ ಆರ್ಸಿಬಿಗೆ ದೊಡ್ಡ ಮೊತ್ತದ ಟಾರ್ಗೆಟನ್ನ ನೀಡಬಹುದು ಅನ್ನೋ ನಿರೀಕ್ಷೆ ಇತ್ತು. ಆದರೆ ಅದೆಲ್ಲವೂ ಸುಳ್ಳಾಯಿತು ಕೇವಲ 6 ಓವರ್ ಗೆ ಮೂರು ಮೇನ್ ವಿಕೆಟ್ಗಳು ಔಟಾದರು.
ಆದರೆ ಕ್ಯಾಪ್ಟನ್ ಇಶಾನ್ ಕಿಶನ್ 38 ಬಾಲ್ಗಳಲ್ಲಿ 80 ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರೂ ಹಾಗೆ ಅನಿಕೇತ್ ಶರ್ಮ 18 ಬಾಲ್ಗೆ 43 ರನ್ ಬಾರಿಸಿದರು ಈ ಮೂಲಕ SRH 9 ವಿಕೆಟ್ ನಷ್ಟಕ್ಕೆ 201 ರನ್ಗಳನ್ನು ಕಲೆ ಹಾಕುದ್ರು. ಇಲ್ಲಿ SRH ಟೀಮ್ ಅನ್ನ ನಿಜವಾಗಲೂ ಕಟ್ಟಿ ಹಾಕಿದ್ದು RCB ಬೌಲರ್ಗಳು ಅದರಲ್ಲೂ ಮುಖ್ಯವಾಗಿ ಜಾಕಬ್ ಡೆಪ್ಸಿ ರುಮಾರಿಯೋ ಶಫರ್ಡ್ ತಲ ಮೂರು ವಿಕೆಟ್ಗಳನ್ನು ತೆಗೆಯ ಮೂಲಕ SRH ಅನ್ನು ಕಟ್ಟಿ ಹಾಕಿದ್ರು.
Also read 👉: ಮನೆಲ್ಲೇ Peanut Butter ಮಾಡೋದು ಹೇಗೆ? Homemade Peanut Butter Recipe in Kannada
RCB ಗೆ ನಿರಾಯಾಸ ಗೆಲುವು🏆
SRH ನೀಡಿದ 201 ರನ್ ಗಳ ಟಾರ್ಗೆಟನ್ನ ಆರ್ಸಿಬಿ ತುಂಬಾ ನಿರಾಯಸವಾಗಿ ಯಾವುದೇ ಟೆನ್ಶನ್ ಇಲ್ದೆ ಚೇಂಜ್ ಮಾಡಕ್ಕಾದ್ರು, ಆರಂಭಿಕ ಬ್ಯಾಟರ್ ಗಳಾದ ದೇವದತ್ ಫಡಿಕಲ್ 26 ಬಾಲ್ಗೆ 61 ಬಾರಿಸಿದರು, ಇನ್ನು ಕೊಹ್ಲಿ ಹತ್ತು ತಿಂಗಳ ನಂತರ ಟಿ20 ಕ್ರಿಕೆಟ್ ಆಡ್ತಿರೋದು, ಆದರೂ ಕೂಡ 38 ಬಾಲ್ಗೆ 69 ರನ್ ಬಾರಿಸುವ ಮೂಲಕ ಕೊನೆಯವರೆಗೂ ಔಟ್ ಆಗದೆ ಆರ್ಸಿಬಿಯನ್ನ ಗೆಲುವಿನ ದಡ ಸೇರಿಸಿದರು ಹಾಗೆ ಸ್ಪಿನ್ನರ್ ಗಳನ್ನ ಬೇಟೆಯಾಡ್ದಂತ ರಜತ್ ಪಟೇದಾರ್ 12 ಬಾಲ್ಗೆ 31 ರನ್ ಕಲೆ ಹಾಕಿದರು, ನಾಲ್ಕು ಓವರ್ ಮುಂಚಿತವಾಗಿಯೇ ಆರ್ಸಿಬಿ ಮ್ಯಾಚ್ ಗೆಲ್ತು.
ದಿನನಿತ್ಯ ಇದೇ ರೀತಿ ಉಪಯುಕ್ತ ಮಾಹಿತಿಗಾಗಿ whatsapp ಚಾನಲ್ ಅನ್ನ ಜಾಯಿನ್ ಆಗಿ 👉: https://chat.whatsapp.com/Ec3Azt7dinH7WKSmcDc4N3?mode=gi_t