ಚಳಿಗಾಲ ಶುರುವಾದ ತಕ್ಷಣ ತುಟಿಗಳು ಒಡೆಯುವುದು, ಒಣಗುವುದು ಬಹುತೇಕ ಎಲ್ಲರಿಗೂ ಕಾಡುವ ಸಮಸ್ಯೆ. ಮುಖದ ಸೌಂದರ್ಯದಲ್ಲಿ ಆಕರ್ಷಿಸುವ ಗುಣ ಇರುವುದು ಕಣ್ಣು ಮತ್ತು ತುಟಿಗಳಿಗೆ ಮಾತ್ರ,ಆದರೆ ಈ ಚಳಿಗಾಲ ತುಟಿಗಳ ಅಂದ ಚೆಂದ ಮತ್ತು ಅಟ್ರಾಕ್ಟಿವ್ ಲೆವೆಲ್ ಅನ್ನ ಕಮ್ಮಿ ಮಾಡಿ ಒಣಗಿ ಸಿಪ್ಪೆಯಾಗಿ ಸೀಳಿಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ಚಳಿಗಾಲದಲ್ಲಿ ತುಟಿಗಳನ್ನು ಕಾಳಜಿ ಮಾಡೋದು ತುಂಬಾನೇ ಮುಖ್ಯ.✨
🌟 ಹಾಗಾದರೆ ತುಟಿಗಳ ರಕ್ಷಣೆ ಹೇಗೆ? 💋( Winter lip care in kannada)

ಚಳಿಗಾಲದಲ್ಲಿ ಒಡೆದು ಒಣಗಿದ ತುಟಿಗಳನ್ನ ಮತ್ತೆ ನೈಸರ್ಗಿಕವಾಗಿ ಮೃದುತ್ವದಿಂದ ಹೊಳೆಯುವಂತೆ ಮಾಡಲು ಈ ಸಿಂಪಲ್ ಸಲಹೆಗಳನ್ನ ಫಾಲೋ ಮಾಡಿ ಒಡೆದ ತುಟಿಗಳಿಂದ ದೂರಾಗಿ. ✅
1️⃣. ನೀರನ್ನ ಹೆಚ್ಚಾಗಿ ಕುಡಿಯಿರಿ. 💧
ಚಳಿಗಾಲದಲ್ಲಿ ಶೀತ ಗಾಳಿ ಬೀಸುವುದರಿಂದ ಚರ್ಮವು ಬೇಗ ಒಣಗಿ ಡ್ರೈ ಯಾಗುತ್ತೆ ಹೀಗಾಗಿ ಹೆಚ್ಚಾಗಿ ನೀರು ಕುಡಿಯುವುದರಿಂದ ದೇಹ ಹೈಡ್ರೇಟ್ ಆಗಿರುತ್ತೆ. ಹೆಚ್ಚು ನೀರು ಸೇವನೆಯಿಂದ ತುಟಿಗಳು ಒಣಗುವುದನ್ನು ತಡೆಯಬಹುದು.
2️⃣• ಲಿಪ್ ಸ್ಕ್ರಬ್ ಮಾಡಿ .🍯
ಈಗಾಗಲೇ ಒಡೆದು ಒಣಗಿರುವ ತುಟಿಯ ಮೇಲಿನ ಚರ್ಮವನ್ನು ತೆಗೆಯಲು ಜೇನುತುಪ್ಪ ಅಥವಾ ಸಕ್ಕರೆ ಬಳಸಿ ನಿಧಾನವಾಗಿ ಸ್ಕ್ರಬ್ ಮಾಡಿ, ಸಕ್ಕರೆ ಬದಲು ಜೇನುತುಪ್ಪ ಬಳಸುವುದು ಉತ್ತಮ ನ್ಯಾಚುರಲ್ ಮತ್ತು ಆಂಟಿಬಯೋಟಿಕ್ ಇದರಿಂದ ಒಣ ಚರ್ಮ ದೂರ ಆಗಿ ತುಟಿಗಳ ನೈಸರ್ಗಿಕ ಮೃದುತ್ವ ಬರಲು ಸಹಾಯ ಮಾಡುತ್ತೆ.
3️⃣• ಉತ್ತಮ ಗುಣಮಟ್ಟದ ಲಿಪ್ ಬಾಮ್ ಹಚ್ಚಿ.🧂
ಒಳ್ಳೆಯ ಉತ್ತಮ ಗುಣಮಟ್ಟದ ಲಿಪ್ ಬಾಮ್ ನ ಪ್ರತಿದಿನ ಹೊರಗೆ ಹೋಗುವ ಮೊದಲು ತುಟಿಗೆ ಹಚ್ಚಿ ಮತ್ತು ತಂಪಾದ ಗಾಳಿಯಿಂದ ಹಾಗೂ ಧೂಳಿನಿಂದ ತುಟಿಯನ್ನು ರಕ್ಷಿಸಲು ಸ್ಕಾರ್ಫ್ ಅಥವಾ ಮಾಸ್ಕ್ ಗಳನ್ನು ಬಳಸಿ.
4️⃣• ತುಟಿ ನೆಕ್ಕುವುದನ್ನು ಬಿಡಿ.❌
ತುಟಿ ಒಣಗಿ ಉರಿಯುವುದರಿಂದ ಕೆಲವರು ಪದೇ ಪದೇ ತುಟಿಗಳನ್ನು ನೆಕ್ಕುತ್ತಿರುತ್ತಾರೆ, ತುಟಿಗಳನ್ನು ನೆಕ್ಕರೆ ತಾತ್ಕಾಲಿಕ ಆರಾಮ ಸಿಗಬಹುದು, ಆದರೆ ಲಾಲಾರಸ ಬೇಗ ಹಾವಿಯಾಗುವುದರಿಂದ ತುಟಿಗಳು ಮತ್ತಷ್ಟು ಒಣಗಿದಂತಾಗುತ್ತವೆ. ಹೀಗಾಗಿ ಆದಷ್ಟು ನೆಕ್ಕುವುದನ್ನು ಕಮ್ಮಿ ಮಾಡಿ.
5️⃣. ರಾತ್ರಿಯಲ್ಲಿ ತುಟಿಯ ಚಿಕಿತ್ಸೆ. 🌙
ರಾತ್ರಿ ಮಲಗುವ ಮುನ್ನ ಪೆಟ್ರೋಲಿಯಂ ಜೆಲ್ಲಿಯನ್ನ (vasaline) ನಿಮ್ಮ ತುಟಿಗೆ ಲೇಪಿಸಿ ಇದು ಲಿಪ್ ಮಸ್ಕ್ ರೀತಿ ಕೆಲಸ ಮಾಡುತ್ತೆ ಜೊತೆಗೆ ರಾತ್ರಿ ಪೂರ ಆಳವಾದ (moisture) ತೇವಾಂಶವನ್ನು ನೀಡುವುದರ ಜೊತೆಗೆ ರಾತ್ರಿಯ (dryness)ಡ್ರೈನೆಸ್ ಇಂದ ರಕ್ಷಣೆಯನ್ನು ನೀಡುತ್ತದೆ.
6️⃣. ಮೂಗಿನ ಮೂಲಕ ಉಸಿರಾಡಿ. 👃
ರಾತ್ರಿ ವೇಳೆ ನಿದ್ದೆ ಸಮಯದಲ್ಲಿ ಕೆಲವರು ಬಾಯಿಯಿಂದ ಉಸಿರಾಡುತ್ತಾರೆ, ಇದರಿಂದ ಬಾಯಿ ಮತ್ತು ತುಟಿಗಳು ಒಣಗುತ್ತವೆ ಹಾಗಾಗಿ ಆದಷ್ಟು ಮೂಗಿನಿಂದ ಉಸಿರಾಡಲು ಪ್ರಯತ್ನಿಸಿ.
7️⃣. ವಸ್ತುಗಳನ್ನು ತುಟಿಗಳಿಂದ ಕಚ್ಚಬೇಡಿ. 👄
ಕೆಲವರು ವಸ್ತುಗಳನ್ನು ತುಟಿಗಳಿಂದ ಕಚ್ಚುತ್ತಿರುತ್ತಾರೆ, ಬಟ್ಟೆ ಪಿನ್ನು, ಏರು ಪಿನ್ ಹೀಗೆ ಇನ್ನಿತರ ವಸ್ತುಗಳನ್ನ ಬಾಯಲ್ಲಿ ಕಚ್ಚುತ್ತಿರುತ್ತಾರೆ, ಇದರಿಂದ ತುಟಿಗಳಲ್ಲಿ ಮತ್ತಷ್ಟು ಇರಿಟೇಶನ್ ಹೆಚ್ಚಾಗುತ್ತೆ. ಹೀಗಾಗಿ ತುಟಿಗಳು ಒಡೆದಿರುವ ಸಂದರ್ಭದಲ್ಲಿ ಆದಷ್ಟು ವಸ್ತುಗಳನ್ನು ಕಚ್ಚುವುದನ್ನು ಕಮ್ಮಿ ಮಾಡಿ
8️⃣. ಉತ್ತಮ ಜೀವನ ಶೈಲಿ. 🍎🥕
* ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ತಿನ್ನಿ ವಿಟಮಿನ್ A, C ಇರುವ ಆಹಾರಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
* ಯು ವಿ ಲೈಟ್ ಮತ್ತು ಕೆಮಿಕಲ್ ಬೇಸ್ಡ್ ಪ್ರಾಡಕ್ಟ್ ಗಳಿಂದ ದೂರವಿರಿ.
ಈ ಟಿಪ್ಸ್ ಗಳನ್ನ ಫಾಲೋ ಮಾಡೋ ಮೂಲಕ ಚಳಿಗಾಲದಲ್ಲಿ ನಿಮ್ಮ ತುಟಿಗಳನ್ನ ಮೃದುವಾಗಿ ರಕ್ಷಿಸಿಕೊಳ್ಳುವ ಜೊತೆಗೆ ಚಳಿಗಾಲವನ್ನು ಕೂಡ ಎಂಜಾಯ್ ಮಾಡಿ.
Follow the NBS Update channel on WhatsApp:👇