Stock market crash: ಇವತ್ತು ಶೇರ್ ಮಾರ್ಕೆಟ್ ಅಲ್ಲಿ ಯಾವ ಕಡೆ ನೋಡಿದರೂ Red.red.red..profits is dead.
ಮಾರ್ಕೆಟ್ ನಲ್ಲಿ ಇಂದು ಎಲ್ಲಾ ಶೇರುಗಳಲ್ಲೂ ಕೆಂಪು ಬಣ್ಣದ ಹೋಳಿ ಹಬ್ಬ ತುಂಬಾ ಜೋರಾಗಿ ನಡೀತು. ವಾರದ ಮೊದಲ ದಿನವೇ ಭಾರತೀಯ stock market ಬಾರಿ ಪತನದೊಂದಿಗೆ ಆರಂಭವಾಗಿದೆ,
ಗ್ಲೋಬಲ್ ಮಾರ್ಕೆಟ್ಸ್ ನ ಕುಸಿತದ ಎಫೆಕ್ಟ್ ನಿಂದಾಗಿ, ಭಾರತೀಯ ಷೇರು ಸೂಚ್ಯಂಕಗಳಾದ BSE 2300 ಅಂಕಗಳು, ಹಾಗೆ ನಿಫ್ಟಿ ಕೂಡ 700 ಅಂಕಗಳ ಕುಸಿತ ಕಂಡು ಲಾಸ್ ನಲ್ಲಿ ಮಾರ್ಕೆಟ್ ಓಪನ್ ಆಯ್ತು.
ಆನಂತರವೂ ಕೂಡ ನಷ್ಟದ ಕಡೆಗೆ ಮುಖ ಮಾಡಿದಂತಹ ಮಾರ್ಕೆಟ್, ಮಧ್ಯಾಹ್ನ ನಂತರ ಸ್ವಲ್ಪ ಮಟ್ಟದ ಚೇತರಿಕೆ ಕಂಡರು ಸಹ ದಿನದ ಅಂತ್ಯಕ್ಕೆ, BSE (-1.71%) 1352 ಪಾಯಿಂಟ್ಸ್ ಕುಸಿದು 77566 ರಲ್ಲಿ ಹಾಗೆ NSE (-1.73%) 422 ಪಾಯಿಂಟ್ಸ್ ಕುಸಿತ ಕಂಡು 24028 ರಲ್ಲಿ ಈ ದಿನದ ಮಾರ್ಕೆಟ್ ನಷ್ಟದಲ್ಲಿ ಕ್ಲೋಸ್ ಆಯ್ತು.
ಇವತ್ತಿನ ಮಾರ್ಕೆಟ್ ಕುಸಿತದಿಂದ 8.5 ಲಕ್ಷ ಕೋಟಿ ಲಾಸ್ ಸಂಭವಿಸಿದೆ.
Also read 👉: ಮನೆಲ್ಲೇ Peanut Butter ಮಾಡೋದು ಹೇಗೆ? Homemade Peanut Butter Recipe in Kannada
ಇವತ್ತಿನ top gainer and top losers stocks list:
🛑 ಈ ದಿನದ ಟಾಪ್ losers 👇
- TATA MOTOR PV
- UltraTech cement
- Maruti
- Eicher motor
- M&M
🟢 ಈ ದಿನದ top gainer 👇
- Wipro
- Reliance
- Apollo hospital
- Infosys
- HCL tech
ಅದರಲ್ಲೂ ಟಾಟಾ ಸ್ಟೀಲ್, ಎಲ್ ಅಂಡ್ ಟಿ, ಎಸ್ಬಿಐ, ಮಾರುತಿ ಸುಜುಕಿಯಂತಹ ದೈತ್ಯ ಕಂಪನಿಗಳ ಷೇರುಗಳು ಶೇ. 5 ರಷ್ಟು ಕುಸಿದವು. ಈ ರೀತಿ ಮಾರ್ಕೆಟ್ ಕುಸಿತಕ್ಕೆ ಏನು ಕಾರಣ ನೋಡೋಣ ಬನ್ನಿ.
Also read 👉: Winter lip care tips in kannada, ಚಳಿಗಾಲದಲ್ಲಿ ಒಡೆದ ತುಟಿಗಳ ಆರೈಕೆಗೆ 8 ಅದ್ಭುತ ಟಿಪ್ಸ್ ,
📉 ಮಾರ್ಕೆಟ್ ಕುಸಿತಕ್ಕೆ ಪ್ರಮುಖ ಕಾರಣಗಳು?
1 ಗ್ಲೋಬಲ್ ಟೆನ್ಶನ್
2 ಕಚ್ಚಾತೈಲದ ಬೆಲೆ ಏರಿಕೆ
3 ರೂಪಾಯಿ ಮೌಲ್ಯ ಕುಸಿತ
4 ಹಣದುಬ್ಬರ
5 ಬಾಂಡ್ ಹಿಲ್ಡ್ ಏರಿಕೆ
6 ವಿದೇಶಿ ಹೂಡಿಕೆದಾರರ ಆತಂಕ
* ಅಮೆರಿಕ ಇರಾನ್ ಇಸ್ರೇಲ್ ಯುದ್ಧ.
ಮಿಡಲ್ ಇಸ್ ನಲ್ಲಿ ನಡೆಯುತ್ತಿರುವಂತ ಯುದ್ಧದಿಂದ ಗ್ಲೋಬಲ್ ಮಾರ್ಕೆಟ್ನಲ್ಲಿ ಅನಿಶ್ಚಿತತೆ ಹೆಚ್ಚಾಗಿದೆ ಇದರಿಂದ ಇನ್ವೆಸ್ಟರ್ ಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
• ಕ್ರೂಡ್ ಆಯಿಲ್ ಬೆಲೆ ಏರಿಕೆ!
ಇರಾನ್ ಇಸ್ರೇಲ್ ಅಮೆರಿಕ ಯುದ್ಧದಿಂದ ಇಂಧನ ಪೂರೈಕೆ ಅಡಚಣೆಯಾಗಿದೆ, ಇದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆಗಳು ಪ್ರತಿ ಬ್ಯಾರೆಲ್ಗೆ ಶೇ. 30 ರಷ್ಟು ಏರಿಕೆಯಾಗಿ $118 ತಲುಪಿದೆ. ಇದು 2022 ರ ರಷ್ಯಾ-ಉಕ್ರೇನ್ ಯುದ್ಧದ ನಂತರ ತೈಲ ಬೆಲೆಗಳು $100 ಗಡಿಯನ್ನು ದಾಟಿರುವುದು ಇದೇ ಮೊದಲು.
ಆದರೆ ಭಾರತಕ್ಕೆ ಬೇಕಿರುವಂತ ಆಯಿಲ್ ಅನ್ನ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ.
* ರೂಪಾಯಿ ಮೌಲ್ಯ ಕುಸಿತ
ಅಮೆರಿಕ ರಷ್ಯಾ ಯುಎಸ್ ಯುದ್ಧದಿಂದ ಕ್ರೂಡ್ ಆಯಿಲ್ ಬೆಲೆ ಯಾವಾಗ ಏರಿಕೆ ಆಯಿತು ಆಗಿನಿಂದ ರೂಪಾಯಿ ಮೌಲ್ಯ ಕೂಡ ಸಾರ್ವಕಾಲಿಕ ಇಳಿಕೆಯನ್ನು ಕಾಣುತ್ತಿದೆ ಯಾಕೆಂದರೆ ಭಾರತ ಅತಿ ಹೆಚ್ಚು ಕಚ್ಚತೈಲವನ್ನು ಆಮದು ಮಾಡಿಕೊಳ್ಳುವಂತಹ ದೇಶ ಇದರಿಂದ ಆಮದು ವೆಚ್ಚ ಏರಿಕೆಯಾಗಲಿದೆ. ಸದ್ಯಕ್ಕೆ ಯುಎಸ್ ಡಾಲರ್ ಮುಂದೆ ಭಾರತದ ರೂಪಾಯಿ 92.2 ರಲ್ಲಿ ಟ್ರೇಡ್ ಆಗ್ತಿದೆ.
* ಹಣದುಬ್ಬರ ಹೆಚ್ಚಾಗಬಹುದು
ಇನ್ನು ಈ ಯುದ್ಧ ಹೀಗೆ ಮುಂದುವರೆದರೆ ಕಚ್ಚಾ ತೈಲದ ಪೂರೈಕೆ ಅಡೆಚಣೆಯಿಂದ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಆಗಬಹುದು ಇದರಿಂದ ದಿನನಿತ್ಯದ ವಸ್ತುಗಳ ಬೆಲೆ ಕೂಡ ಜಾಸ್ತಿಯಾಗಿ ಇನ್ಫ್ಲೇಶನ್ ಹಣದುಬ್ಬರ ಹೆಚ್ಚಾಗುತ್ತದೆ.
* ಬಾಂಡ್ ಹಿಲ್ಡ್ ಏರಿಕೆ ಸಾಧ್ಯತೆ
ಹಣದುಬ್ಬರ ಹೆಚ್ಚಾದರೆ ಅಮೆರಿಕದ ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಇಡಬಹುದು ಇದರಿಂದ ಬಾಂಡ್ ಹಿಲ್ಡ್ ಏರಿಕೆ ಆಗುತ್ತೆ ಇನ್ವೆಸ್ಟರ್ಸ್ ಸೇಫ್ ಇನ್ವೆಸ್ಟ್ಮೆಂಟ್ ಕಡೆ ಮುಖ ಮಾಡುತ್ತಾರೆ ಮಾರ್ಕೆಟ್ ಇಂದ ಎಕ್ಸಿಟ್ ಆಗ್ತಾರೆ.
* (FIIs) ವಿದೇಶಿ ಹೂಡಿಕೆದಾರರು ಎಕ್ಸಿಟ್.
ವಿದೇಶಿ ಹೂಡಿಕೆದಾರರು ಇನ್ವೆಸ್ಟ್ಮೆಂಟನ್ನು ಮಾರಾಟ ಮಾಡಿ ಭಾರತ ಬಿಟ್ಟು ಹೋಗ್ತಿದ್ದಾರೆ, ಮಾರ್ಚ್ ಮೊದಲ ವಾರದಲ್ಲಿ 16,000 ಕೋಟಿ ಮತ್ತೆ ಕಳೆದ ನಾಲ್ಕು ದಿನಗಳಲ್ಲಿ 21800 ಕೋಟಿ ಮೊತ್ತದ ಶೇರುಗಳನ್ನು ಮಾರಾಟ ಮಾಡಿ ತಮ್ಮ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ.
ಈ ಎಲ್ಲಾ ಕಾರಣಗಳಿಂದ ಜಾಗತಿಕ ಮಾರುಕಟ್ಟೆಗಾದ ಅಮೆರಿಕ ಯುರೋಪ್ ಮತ್ತು ಏಷ್ಯಾದ ಮಾರುಕಟ್ಟೆಗಳು ಕೂಡ ಬಾರಿ ಕುಸಿತವನ್ನು ಕಂಡಿವೆ, ಅದರ ಪರಿಣಾಮ ಇಂದು ಭಾರತೀಯ ಮಾರುಕಟ್ಟೆಯಲ್ಲೂ ಕಂಡು ಬಂತು.
ಇದೇ ರೀತಿ ಉಪಯುಕ್ತ ಮಾಹಿತಿಗಾಗಿ ವಾಟ್ಸಾಪ್ ಚಾನೆಲ್ ನಲ್ಲಿ ಜೋಯ್ನ್ ಆಗಿ👉: https://chat.whatsapp.com/Etd2aBJrM6L28xqUkYeD70?mode=gi_t