ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಪ್ರಪಂಚ ನೆಮ್ಮದಿಯಾಗಿರೋದು ಇಷ್ಟ ಇಲ್ಲ ಅನ್ಸುತ್ತೆ ಅದಕ್ಕೆ ಏನಾದರೂ ಒಂದು ವಿಷಯಗಳನ್ನ ತಗೊಂಡು ಪ್ರಪಂಚದಲ್ಲಿ ಅಶಾಂತಿ ಮಾಡ್ಸೋಕೆ ಕಾಯುತ್ತಾನೆ ಇತ್ತೀಚೆಗೆ ಇಂಡಿಯಾ ಮತ್ತೆ ಯುರೋಪ್ ಯೂನಿಯನ್ ಜೊತೆ ಟ್ರೇಡ್ ಒಪ್ಪಂದ ಆಯ್ತು ,ಇದು ಭಾರತದ ಆರ್ಥಿಕತೆಗೆ ಮತ್ತಷ್ಟು ಬಲ ತುಂಬುವಂತ ಟ್ರೇಡ್ ಡೀಲ್ ಆಗಿತ್ತು, ಇದು ಟ್ರಂಪ್ಗೆ ಸಹಿಸೋಕಾಗಿಲ್ಲ ಸಿಕ್ಕಾಪಟ್ಟೆ ಹೊಟ್ಟೆ ಉರ್ಕೊಂಡಿದ್ದ,
* ಓಕೆ ಅದೆಲ್ಲ ಆಯ್ತು ಅನ್ನೋವಷ್ಟರಲ್ಲಿ ಇದೀಗ ಟ್ರಂಪ್ ಹೂಡಿಕೆದಾರರ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗ ಮಾಡಿದ್ದಾರೆ gold and silver ಮಾರ್ಕೆಟ್ನಲ್ಲಿ ರಕ್ತದೋಕುಳಿಯಾಗಿದೆ.
Read also : ಚಳಿಗಾಲದಲ್ಲಿ ಒಡೆದ ತುಟಿಗಳ ಆರೈಕೆಗೆ 8 ಅದ್ಭುತ ಟಿಪ್ಸ್
* ಟ್ರಂಪ್ ತಗೊಂಡ ಆ ಒಂದು ನಿರ್ಧಾರ ಹೂಡಿಕೆದಾರರಲ್ಲಿ ಭಯ ಹುಟ್ಟಿಸಿದ್ದೆ , ಕಳೆದೆರಡು ವರ್ಷಗಳಿಂದ ಒಂದೇ ಸಮನೆ ಆಕಾಶದ ಕಡೆ ಮುಖ ಮಾಡಿ ಓಡುತ್ತಿದ್ದಂತೆ gold and silver ಗೆ ಬ್ರೇಕ್ ಬಿದಿದ್ದು, ಪಾತಾಳಕ್ಕೆ ಕುಸ್ತಿವೆ. ಜನಸಾಮಾನ್ಯರು ಚಿನ್ನ ತಗೊಳ್ಳೋಕೆ ಹಿಂದೆ ಮುಂದೆ ಯೋಚನೆ ಮಾಡು ಅಂತ ಪರಿಸ್ಥಿತಿ ಬಂದಿತು, ಚಿನ್ನ ಮತ್ತು ಬೆಳ್ಳಿ ಎರಡು ಬೆಟ್ಟ ಏರಿ ಕೂತಿದ್ವು ಆದರೆ ಇದೀಗ ದಿಢೀರ್ ನೆ ಪಾತಾಳಕ್ಕೆ ಕುಸಿದು ಬಿದ್ದಿವೆ.
Watch full video on Youtube:
ಇದಕ್ಕೆ ಏನು ಕಾರಣ? ಚಿನ್ನ ಇನ್ನು ಬೀಳುತ್ತಾ? ಅಥವಾ ಮತ್ತೆ ಮೇಲಕ್ಕೆ ಇರುತ್ತಾ! ಈ ಚಿನ್ನ ಮತ್ತೆ ಬೆಳ್ಳಿ ಹಿಂದೆ ಇರುವಂತ ಜಿಯೋ ಪೊಲಿಟಿಕಲ್ ಗೇಮ್ ಏನು ಅನ್ನೋದನ್ನ ಈ ವಿಡಿಯೋದಲ್ಲಿ ಕಂಪ್ಲೀಟ್ ಆಗಿ ತಿಳ್ಕೊಳೋಣ ಬನ್ನಿ.
* ಜನವರಿ 29ನೇ ತಾರೀಕು ಒಂದು ಲಕ್ಷದ 30000 ಇದ್ದಂತಹ ಚಿನ್ನ 21% ಕುಸಿತ ಕಂಡು 1.50 ಸಾವಿರ ಆದರೆ ಹಾಗೆ ಬೆಳ್ಳಿ ಕೂಡ 4,20,000ನಿಂದ 37% ಕುಸಿತ ಕಂಡು 2,50,000 ಆಯ್ತಾ, ಕೇವಲ ಎರಡು ಮೂರು ದಿನಗಳಲ್ಲಿ ಆಕಾಶದ ಎತ್ತರದಲ್ಲಿ ಇದ್ದಂತ ಚಿನ್ನ ಮತ್ತೆ ಬೆಳ್ಳಿ ಇದೀಗ ದಿಡೀರನೆ ಕುಸಿತಾಕಣಕ್ಕೆ ಏನು ಕಾರಣ ಅದನ್ನು ತಿಳಿದುಕೊಳ್ಳಬೇಕು ಮೊದಲು ಚಿನ್ನ ಮತ್ತು ಬೆಳ್ಳಿ, ಕಳೆದ ಎರಡು ವರ್ಷದಿಂದ ನಾಗಾಲೋಟವಾಗಿ ಆಕಾಶದ ಕಡೆ ಓಡುತ್ತಿದ್ದದ್ದು ಏಕೆ ಅನ್ನೋದನ್ನ ತಿಳಿದುಕೊಳ್ಳಬೇಕು ಆಗ ಈ ದಿಢೀರ್ ಕುಸಿತಕ್ಕೆ ಏನ್ ಕಾರಣ ಅನ್ನೋದು ಗೊತ್ತಾಗುತ್ತೆ .
*ಈ ಚಿನ್ನ ಮತ್ತೆ ಬೆಳ್ಳಿ ಬಾರಿ ಏರಿಕೆಗೆ ಆಗೋಕೆ ಫಸ್ಟ್ ರೀಸನ್- ಜೀಯೊ ಪೊಲಿಟಿಕಲ್ ಟೆನ್ಶನ್ ಮತ್ತೆ ಟ್ಯಾರಿಪ್ ವಾರ್!
ಕಳೆದ ಮೂರು ನಾಲ್ಕು ವರ್ಷಗಳಿಂದ ನಿರಂತರವಾಗಿ ರಷ್ಯಾ ಮತ್ತೆ ಯುಕ್ರೇನ್ ನಡುವೆ ಯುದ್ಧ ನಡೆಯುತ್ತಲೇ ಇದೆ ಇನ್ನು ಈ ಕಡೆ ಮಿಡಲ್ ಲಿಸ್ಟ್ ನಲ್ಲಿ ಇರಾನ್ ಮತ್ತೆ ಅಮೆರಿಕ ಸಂಘರ್ಷ, ಇಸ್ರೇಲ್ ಮತ್ತೆ ಗಾಜಾ ಸಂಘರ್ಷ ಇದರಿಂದ ಪ್ರಪಂಚದಲ್ಲಿ ಯುದ್ಧದ ಭಯ ಹೆಚ್ಚಾಗುತ್ತಿದೆ ಭಯದ ವಾತಾವರಣ ಇದೆ ಅದರಲ್ಲೂ ಈ ಟ್ರಂಪ್ ಬಂದ್ಮೇಲೆ ಅಂತೂ ಯಾವಾಗ ಏನ್ ಡಿಸಷನ್ಗಳನ್ನು ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ಹೇಳಕ್ಕಾಗಲ್ಲ ಅಮೆರಿಕದ ನಿರ್ಧಾರಗಳು ಇಡೀ ಪ್ರಪಂಚದ ಮೇಲೆ ತುಂಬಾ ಪ್ರಭಾವ ಬೀರುತ್ತವೆ, ಇನ್ನು ರಷ್ಯಾ ಆದ್ಮೇಲೆ ಸ್ಯಾಂಕ್ಷನ್ ಅಂತಾನೆ, ಚೀನಾದ ಮೇಲೆ ಟ್ಯಾರಿಫ್ , ಭಾರತ ರಷ್ಯಾದ ಆಯಿಲ್ ಅನ್ನು ಖರೀದಿ ಮಾಡ್ತಿದೆ ಭಾರತಕ್ಕೂ ಟ್ಯಾರಿಪ್ ವೆನಿಜುವೆಲಾ ದೇಶಕ್ಕೆ ನುಗ್ಗಿ ರಾತ್ರೋರಾತ್ರಿ ದೇಶದ ಅಧ್ಯಕ್ಷನನ್ನೆ ಅರೆಸ್ಟ್ ಮಾಡ್ಕೋ ಬರ್ತಾರೆ, ಇನ್ನು ಕೊನೆಗೆ ಅಮೆರಿಕಾಗೆ ಗ್ರೀನ್ ಲ್ಯಾಂಡ್ ಬೇಕೆ ಬೇಕು ಕೊಡ್ತಿರೋ ಇಲ್ವೊ ಕೊಟ್ಟಿಲ್ಲ ಅಂದ್ರೆ ಎಲ್ಲ ಯುರೋಪ್ ರಾಷ್ಟ್ರಗಳ ಮೇಲೆ ಟ್ಯಾರಿಫ್ ಹಾಕ್ತಿನಿ ಅಂತ ಎದುರಿಸುತ್ತೇನೆ ಹೀಗೆ ಎಲ್ಲಾ ದೇಶಗಳನ್ನು ಹೆದರಿಸುತ್ತಿರೋ ಹುಚ್ಚು ದೊರೆ ಟ್ಯಾರಿಫ್ ಹುಚ್ಚಾಟಕ್ಕೆ ಪ್ರಪಂಚದ ರಾಜಕೀಯದಲ್ಲಿ ಉದ್ವಿಗ್ನತೆ ಹೆಚ್ಚಾಯ್ತು. ಯಾವಾಗ ಫಿಯರ್ ಹೆಚ್ಚಾಗುತ್ತೊ ಆಗ ದುಡ್ಡು ಗೋಲ್ಡ್ ಕಡೆ ಹೋಗುತ್ತೆ
2.Central Banks gold buying:
ಇದರ ಜೊತೆಗೆ ಎಲ್ಲಾ ದೇಶದ ಸೆಂಟ್ರಲ್ ಬ್ಯಾಂಕ್ ಗಳು ಇಂಟರ್ನ್ಯಾಷನಲ್ ಮಾರ್ಕೆಟ್ ನಿಂದ ಮುಗಿಬಿದ್ದು ಚಿನ್ನವನ್ನು ಟಂಟನ್ ಗಟ್ಲೆ ಖರೀದಿ ಮಾಡುತ್ತಿವೆ ಭಾರತ ಒಂದೇ ಕಳೆದ ವರ್ಷ ಏಳು ಟನ್ನಷ್ಟು ಚಿನ್ನವನ್ನ ಖರೀದಿ ಮಾಡಿದೆ ಸದ್ಯಕ್ಕೆ ಭಾರತದ ಗೋಲ್ಡ್ ರಿಸರ್ವ್ ನಲ್ಲಿ ಸುಮಾರು 880 ಮೆಟ್ರಿಕ್ ಟನ್ ಅಷ್ಟು ಚಿನ್ನ ಇದೆ, ಇನ್ನು ಚೀನಾ ಕೂಡ ಇಂಟರ್ನ್ಯಾಷನಲ್ ಮಾರ್ಕೆಟ್ನಲ್ಲಿ ಅತಿ ಹೆಚ್ಚು ಚಿನ್ನವನ್ನು ಖರೀದಿ ಮಾಡುವ ರಾಷ್ಟ್ರ. ಹೀಗೆ ಎಲ್ಲಾ ದೇಶಗಳು ಮುಗಿಬಿದ್ದು ಚಿನ್ನವನ್ನು ಟನ್ ಗಟ್ಟಲೆ ಖರೀದಿ ಮಾಡೋದಕ್ಕೆ ಕಾರಣ ಅಮೇರಿಕಾ,
ಹೇಗೆ ಅಂದ್ರೆ ರಷ್ಯಾ ಮತ್ತೆ ಯುಕ್ರೇನ್ ಯುದ್ಧ ಶುರುವಾದಾಗ ರಷ್ಯಾದ ಮೇಲೆ ಸ್ಯಾಂಕ್ಷನ್ ಹಾಕೋದಕ್ಕೆ ಅಂತ ರಷ್ಯಾದ ಸುಮಾರು 330 ಬಿಲಿಯನ್ ಡಾಲರ್ ಫಾರಿನ್ ರಿಸರ್ವ ಅನ್ನು ಅಮೇರಿಕಾ freeze ಮಾಡಿತ್ತು .
ಅಮೆರಿಕ ಹಿಗೆ ಮಾಡಿದ್ದು ನೋಡಿ ಎಲ್ಲ ದೇಶಗಳು ಭಯ ಬಿದ್ವು. ಹೀಗಾಗಿ ಮುಂದೊಂದಿನ ಅಮೆರಿಕ ಜೊತೆ ನಮಗೂ ಏನಾದರೂ ಜಗಳ ಅಂಟ್ಕೊಂಡ್ರೆ ಅಮೆರಿಕ ನಮ್ ದೇಶದ ಯುಎಸ್ ಡಾಲರ್ ರಿಸರ್ವ್ ವನ್ನು ಕೂಡ ಇದೇ ರೀತಿ freeze ಮಾಡಬಹುದು ಅನ್ನೋ ಭಯದಿಂದ ಎಲ್ಲಾ ದೇಶಗಳು, ಅದರಲ್ಲೂ ಮುಖ್ಯವಾಗಿ ಬ್ರಿಕ್ಸ್ ಕಂಟ್ರಿಗಳು ಡಾಲರ್ ಮೇಲಿನ dependency ಕಮ್ಮಿ ಮಾಡೋಕೆ ಮುಂದಾದ್ವು, ಇನ್ಫ್ಲೇಶನ್ ಗೆ ಗೋಲ್ಡ್ ಎಡ್ಜ್ ಇಂಗ್ ಆಗುತ್ತೆ ಹಾಗೆ ಡಾಲರ್ ಡಿಪೆಂಡೆಂಸಿಯನ್ನು ಕಮ್ಮಿ ಮಾಡಿದಂಗ್ ಆಗುತ್ತೆ ಅಂತ ಹೇಳಿ ಎಲ್ಲಾ ದೇಶಗಳು ಚಿನ್ನವನ್ನು ಖರೀದಿ ಮಾಡೋದಿಕ್ಕೆ ಶುರು ಮಾಡಿದವು, ಹೀಗಾಗಿ ಚಿನ್ನ ಆಕಾಶದ ಎತ್ತರಕ್ಕೆ ಹೋಗೋದಕ್ಕೆ ಸೆಂಟ್ರಲ್ ಬ್ಯಾಂಕ್ ಗಳ ಈ ಮ್ಯಾಸಿವ್ ಗೋಲ್ಡ್ ಬೈಯಿಂಗ್ ಕೂಡ ಒಂದು ಮೇನ್ ಕಾರಣ.
3.Fed rate cut :
ಅಮೆರಿಕದಲ್ಲಿ ಬಡ್ಡಿದರವನ್ನು ಕಮ್ಮಿ ಮಾಡು ಅಂತ ಟ್ರಂಪ್ ಯುಎಸ್ ಹೆಡ್ ಮೇಲೆ ತುಂಬಾ ಪ್ರೆಶರ್ ಆಗ್ತಿದ್ರು. ಇದರಿಂದ ಯು ಎಸ್ ಫ್ರೆಂಡ್ ಚೇರ್ಮನ್ ಬಡ್ಡಿ ದರವನ್ನು ಕಮ್ಮಿ ಮಾಡಬಹುದು ಅನ್ನೋ ಅನುಮಾನದಿಂದ ಡಾಲರ್ ವೀಕ್ ಆಯ್ತು,
ಡಾಲರ್ ವೀಕ್ ಆದರೆ ಗೋಲ್ಡ್ ಸ್ಟ್ರಾಂಗ್ ಆಗುತ್ತೆ ಹೇಗೆ ಅಂದ್ರೆ ಕರೆನ್ಸಿ ಮಾರ್ಕೆಟ್ ನಲ್ಲಿ ಲಾಭ ಇಲ್ಲ ಅಂತ ಅಲ್ಲಿಂದ ದುಡ್ಡನ್ನ ತೆಗೆದು ಇನ್ವೆಸ್ಟರ್ಸ್ ಗೋಲ್ಡ್ ಮೇಲೆ ಇನ್ವೆಸ್ಟ್ ಮಾಡುತ್ತಾರೆ ಇದರಿಂದ ಗೋಲ್ಡ್ ರ್ಯಾಲಿ ಆಗುತ್ತೆ ಗೋಲ್ಡ್ ನ ಏರಿಳಿತದ ಮೇಲೆ ಡಾಲರ್ ತುಂಬಾ ಪ್ರಭಾವ ಇರುತ್ತೆ, ಹೀಗಾಗಿ ಡಾಲರ್ ವೀಕ್ ಆಗಿದ್ದು ಕೂಡ ಚಿನ್ನ ಏರಿಕೆ ಆಗೋದಕ್ಕೆ ಒಂದು ಮುಖ್ಯ ಕಾರಣ
4.INDUSTRIAL DEMAND :
ಚಿನ್ನವನ್ನ ಇಷ್ಟ ಪಡದೇ ಇರೋರು ಯಾರಿದ್ದಾರೆ ಎಲ್ಲರೂ ಕೂಡ ಇಷ್ಟಪಡುತ್ತಾರೆ ಹೀಗಾಗಿ ಚಿನ್ನಕ್ಕೆ ಎಮೋಷನಲ್ ಕನೆಕ್ಷನ್ ಇದೆ ಆದರೆ ಸಿಲ್ವರ್ ಗೆ ಎಮೋಷನಲ್ ಕನೆಕ್ಷನ್ ಜೊತೆ ಇಂಡಸ್ಟ್ರಿ ಕನೆಕ್ಷನ್ ಕೂಡ ಇದೆ ಹೀಗಾಗಿ ಚಿನ್ನ ಒಂದು ಹೆಜ್ಜೆ ಮುಂದೆ ಹೋದರೆ ಬೆಳ್ಳಿ ಹತ್ತು ಹೆಜ್ಜೆ ಮುಂದೆ ಹೋಗುತ್ತದೆ.
ಬೆಳ್ಳಿಯನ್ನು ಕೇವಲ ಆಭರಣವಾಗಿ ಮಾತ್ರ ಅಲ್ಲ ಇಂಡಸ್ಟ್ರಿಗಳಲ್ಲೂ ಕೂಡ ಹೆಚ್ಚಾಗಿ ಬಳಕೆಮಾಡುತ್ತಿದ್ದಾರೆ ಸೋಲಾರ್ ಪ್ಯಾನೆಲ್ ಎಲೆಕ್ಟ್ರಿಕ್ ವೆಹಿಕಲ್ಸ್ ಸೆಮಿಕಂಡಕ್ಟರ್ ಚಿಪ್ಸ್ ಗಳ ತಯಾರಿಕೆಯಲ್ಲಿ ಬೆಳ್ಳಿ ಹೆಚ್ಚಾಗಿ ಬೆಳಕೆ ಆಗ್ತಿದೆ. ಆದರೆ ಬೆಳ್ಳಿ ಡೈರೆಕ್ಟಾಗಿ ಭೂಮಿಯಲ್ಲಿ ಸಿಗಲ್ಲ ಬೇರೆ ಮೆಟಲ್ ಗಳನ್ನ ಮೈನಿಂಗ್ ಮಾಡಬೇಕಾದರೆ ಬೆಳ್ಳಿ ಬೈ ಪ್ರಾಡಕ್ಟ್ ಆಗಿ ಸಿಗುತ್ತೆ. ಬೆಳ್ಳಿ ಮಾರ್ಕೆಟ್ ಚಿನ್ನಕಿಂತ ಚಿಕ್ಕದು, ಹೀಗಾಗಿ ಸ್ಪೆಕ್ಯುಲೇಶನ್ ಕೂಡ ಜಾಸ್ತಿ ಇರುತ್ತೆ , ಸಪೈ ಕಮ್ಮಿದ್ದು ಡಿಮ್ಯಾಂಡ್ ಜಾಸ್ತಿ ಇರೋದ್ರಿಂದ ಬೆಳ್ಳಿ ಕೂಡ ರಾಕೆಟ್ ವೇಗದಲ್ಲಿ ಮೇಲೆಕ್ಕೆ ಹಾರುತಿದೆ.
5.INVESTMENT:
ಭಯ ಜಾಸ್ತಿಯಾದಾಗ ದುಡ್ಡು ಯಾವಾಗಲೂ ಗೋಲ್ಡ್ ಕಡೆ move ಹೋಗುತ್ತೆ ಹೀಗಾಗಿ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ ಮತ್ತೆ ಹೆಡ್ಜ್ ಫಂಡ್ ಸಂಸ್ಥೆಗಳ ಹೂಡಿಕೆದಾರರಲ್ಲಿ ಭಯ ಹೆಚ್ಚಾಗಿದೆ ಹೀಗಾಗಿ ತಮ್ಮ ದುಡ್ಡನ್ನ ಸೇಫ್ ಇನ್ವೆಸ್ಟ್ಮೆಂಟ್ ಆಗಿರುವಂತೆ ಚಿನ್ನದ ಮೇಲೆ ಇನ್ವೆಸ್ಟ್ ಮಾಡುತ್ತಿದ್ದಾರೆ, ಇದರ ಜೊತೆಗೆ ರಿಟೇಲ್ ಇನ್ವೆಸ್ಟ್ಮೆಂಟ್ ಕೂಡ ಕೊರೊನಾದ ನಂತರ ಬಾರಿ ಮಟ್ಟದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದೆ,
ಹಾಗಾದರೆ
ಇದೀಗ ಮಾರ್ಕೆಟ್ ನ ಈ ಸಡನ್ crash ಗೆ ಕಾರಣ ಟ್ರಂಪ್ ನಿರ್ಧಾರ ಹೇಗೆಂದರೆ
ಫೆಡರಲ್ ರಿಸರ್ವ್ನ ಮುಂದಿನ ಅಧ್ಯಕ್ಷರಾಗಿ ‘ಕೆವಿನ್ ವಾರ್ಷ್’ ಅವರನ್ನು ನಾವು ಅನ್ನೋರನ್ನ ನೆಕ್ಸ್ಟ್ ಫೆಡ್ ಚೇರ್ಮೆನ್ ಹಾಗೆ ಸೆಲೆಕ್ಟ್ ಮಾಡಿದಿವಿ ಅಂತ ಓಪನ್ ಆಗಿ ಅನೌನ್ಸ್ ಮಾಡ್ತಾರೆ
ಆದರೆ ಫೆಡ್ ಜರಮ್ ಪೊವೆಲ್ ಅಧಿಕಾರಾವಧಿ ಮುಗಿಯುವುದಕ್ಕೂ ಮುಂಚೇನೆ ಡೊನಾಲ್ಡ್ ಟ್ರಂಪ್ ಮುಂದಿನ ಫೆಡ್ ಚೇರ್ಮನ್ ಹೆಸರನ್ನು ರೀತಿ ಸಡನ್ನಾಗಿ ಅನೌನ್ಸ್ ಮಾಡಿದ್ರಿಂದ ಮಾರ್ಕೆಟ್ ನಲ್ಲಿ ಅನ್ಸರ್ಟನಿಟಿ ಬಯ ಶುರುವಾಯಿತು ಇದರಿಂದ ಈಗಾಗಲೇ ಪ್ರಾಫಿಟ್ ಬುಕಿಂಗ್ ಮಾಡುವುದಕ್ಕೆ ಕಾಯ್ತಾಯಿದ್ದಂತ ದೊಡ್ಡ ದೊಡ್ಡ ಹೂಡಿಕೆದಾರರು ಒಂದೇ ಸಲ ಎಕ್ಸಿಟ್ ಆದ್ರು, ಹೀಗಾಗಿ ಮಾರ್ಕೆಟ್ ದಿಡೀರನೆ ಪಾತಾಳಕ್ಕೆ ಕುಸಿಯೋಕೆ ಸ್ಟಾರ್ಟ್ ಆಯ್ತು.