ಇವತ್ತಿನ ಸೋಶಿಯಲ್ ಮೀಡಿಯಾ ಜಗತ್ತು ಎಷ್ಟು ಶಕ್ತಿಶಾಲಿಯಾಗಿದೆ ಅದು ಜನರ ಮೇಲೆ ಎಷ್ಟು ಪ್ರಭಾವ ಬೀರುತ್ತೆ ಅಂದ್ರೆ ಇದು ಒಬ್ಬ ವ್ಯಕ್ತಿಯ ಜೀವವನ್ನೇ ತೆಗೆದುಕೊಳ್ಳುವಷ್ಟು ಪವರ್ಫುಲ್ ಆಗಿದೆ.ಇದಕ್ಕೆ ಬೆಸ್ಟ್ ಎಕ್ಸಾಮ್ಪಲ್ ಅಂದ್ರೆ ಇತ್ತೀಚೆಗೆ ನಡೆದಂತ Kerala bus issue
“ಒಂದು ವೈರಲ್ ವಿಡಿಯೋ…
ಒಂದು ಆರೋಪ…ಮತ್ತು ಕೊನೆಗೆ ಒಂದು ಜೀವದ ಅಂತ್ಯವಾಯಿತು”…
ಈ ಘಟನೆ ಸೋಷಿಯಲ್ ಮೀಡಿಯಾ ನ್ಯಾಯ ನಿರ್ಣಯ ಎಷ್ಟು ಅಪಾಯಕಾರಿ ಅನ್ನೋದನ್ನ ತೋರಿಸಿದೆ ಇದು ಇಂದಿನ ಸಮಾಜಕ್ಕೆ ದೊಡ್ಡ ಪಾಠ ಆದರೆ ಮುಂದಿನ ಪೀಳಿಗೆಗೆ ಇದೊಂದು ಎಕ್ಸಾಂಪಲ್ ಆಗುತ್ತೆ. ಹಾಗಾದರೆ ಈ ಕೇರಳದ ಬಸ್ ನಲ್ಲಿ ಏನಾಯ್ತು? ಆ ಮಹಿಳೆ ಮಾಡಿದ ಆರೋಪವೇನು? ಈ ಘಟನೆಯ ಸತ್ಯ ಅಸತ್ಯತೆ ಬಗ್ಗೆ ಒಂದಷ್ಟು ವಿಚಾರಗಳನ್ನು ಈ ವಿಡಿಯೋದಲ್ಲಿ ನೋಡೋಣ ಬನ್ನಿ.
ಕಳೆದ ಜನವರಿ 16 ತಾರೀಕು ಕೇರಳದಲ್ಲಿ ಈ ಘಟನೆ ನಡೆಯುತ್ತೆ, 42 ವರ್ಷದ ದೀಪಕ್ ಅವರು ಕಣ್ಣೂರಿನಿಂದ ಪಯ್ಯನೂರಿಗೆ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದರು ಅದೇ ಬಸ್ಸಲ್ಲಿ ಸಂಜಿತ ಮುಸ್ತಫ ಎಂಬ ಮಹಿಳೆ ಕೂಡ ಇದ್ರು, ಬಸ್ ತುಂಬಾ ಜನ ಇದ್ದಿದ್ರಿಂದ ರಶ್ ಆಗಿತ್ತು, ಈ ಸಂದರ್ಭದಲ್ಲಿ ಸಂಜಿತಾ ಮುಸ್ತಫ ಅವರು ಆ ವ್ಯಕ್ತಿ ನನಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ ಅಂತ ಆರೋಪ ಮಾಡ್ತಾಳೆ, ಅಷ್ಟೇ ಅಲ್ಲ ದೀಪಕ್ ನ ವಿಡಿಯೋ ವನ್ನ ಆತನಿಗೆ ಗೊತ್ತಿಲ್ಲದಂತೆ ರಹಸ್ಯವಾಗಿ ರೆಕಾರ್ಡ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಾಳೆ, ಸಂಜಿತ ಆ ವಿಡಿಯೋವನ್ನು ಇನ್ಸ್ಟಾಗ್ರಾಮ್ ಮತ್ತೆ ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆ, ವಿಡಿಯೋ ವೈರಲ್ ಆಗುತ್ತೆ ಮಿಲಿಯನ್ ಗಟ್ಲೆ ಜನರು ಅದನ್ನು ನೋಡ್ತರೆ.
Read also: 👇
Gold rate today: ಚಿನ್ನ ಕೂಡ ಡೌನ್, ಬೆಳ್ಳಿ 26 ಸಾವಿರ ಕುಸಿತ,Gold and silver price crash after budget
ವಿಡಿಯೋ ವೈರಲ್ ಆದ ನಂತರ ದೀಪಕ್ ಗೆ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಟ್ರೋಲಿಂಗ್ ಅವಮಾನ ಬೆದರಿಕೆಗಳು ಶುರುವಾಗುತ್ತೆ ಜನರು ದೀಪಕ್ ಅವರನ್ನು ಕಟುವಾಗಿ ಟೀಕಿಸಲು ಶುರುಮಾಡುತ್ತಾರೆ. ಇವನು ಅಪರಾಧಿ ಇವನು ಶಿಕ್ಷೆಗೆ ಅರ್ಹ ಇವನು ಅದು ಇದು ಅಂತ ನ್ಯಾಯಾಲಯದಲ್ಲಿ ತೀರ್ಪು ಬರೋ ಮೊದಲೇ ಜನರೇನೇ ತೀರ್ಮಾನ ಮಾಡಿಬಿಟ್ರು, ಎಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಬಾಕ್ಸಲ್ಲಿ.
ನಂತರ ಆ ವಿಡಿಯೋ ದೀಪಕ್ ಫ್ರೆಂಡ್ ಫ್ಯಾಮಿಲಿ ಸರ್ಕಲ್ ಕೊನೆಗೆ ದೀಪಕ್ ಕೂಡ ತಲುಪುತ್ತದೆ, ಇದರಿಂದ ಆತನ ಮುಖ ಹೆಸರು ಎಲ್ಲ ಪಬ್ಲಿಕ್ ಆಗುತ್ತೆ ಗೌರವ ಮರ್ಯಾದೆ ಹಾಳಾಗುತ್ತೆ.
ಚಳಿಗಾಲದಲ್ಲಿ ಒಡೆದ ತುಟಿಗಳ ಆರೈಕೆಗೆ 8 ಅದ್ಭುತ ಟಿಪ್ಸ್
ಇನ್ನು ಆ ವಿಡಿಯೋವನ್ನು ನೀವು ಗಮನಿಸಿದರೆ ದೀಪಕ್ ಕೈ ಆಚಾನಕ್ಕಾಗಿ ತಗಳಲಿದಂತೆ ಕಾಣಿಸುತ್ತೆ ಹೊರತು ಉದ್ದೇಶಪೂರ್ವಕವಾಗಿ ಮಾಡಿದಂತೆ ಕಾಣಲ್ಲ,
ಆದರೆ ಸೋಶಿಯಲ್ ಮೀಡಿಯಾದಲಾದಂತ ಅವಮಾನ ಮತ್ತೆ ಸುಳ್ಳು ಆರೋಪ ಎಲ್ಲ ಘಟನೆಗಳಿಂದ ಮಾನಸಿಕ ಒತ್ತಡವನ್ನು ತಾಳಲಾಗಿದೆ, ವಿಡಿಯೋ ವೈರಲ್ಲಾದ ಎರಡೇ ದಿನಗಳಲ್ಲಿ ಅಂದರೆ ಜನವರಿ 18ರಂದು ದೀಪಕ್ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
ಅವರ ತಂದೆ ತಾಯಿ ಮತ್ತು ಸ್ನೇಹಿತರು ದೀಪಕ್ ತಪ್ಪು ಮಾಡಿಲ್ಲ ಆದರೆ ಆ ಮಹಿಳೆ ಮತ್ತೆ ಸೋಶಿಯಲ್ ಮೀಡಿಯಾ ಸೇರಿ ನಮ್ಮ ಮಗನನ್ನ ಕೊಂದ್ರು ಅಂತ ಕಣ್ಣೀರಿಡುತ್ತಿದ್ದಾರೆ.
ಇನ್ನು ಈ ಆತ್ಮಹತ್ಯೆ ನಂತರ ಪೊಲೀಸರು ಕೇಸ್ ಧಾಖಲಿಸಿ, ಆ ಮಹಿಳೆ ಸಂಜಿತ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ಎಂಬ ಆರೋಪದಲ್ಲಿ ಆಕೆಯನ್ನು ಅರೆಸ್ಟ್ ಮಾಡುತ್ತಾರೆ.
ವಿಡಿಯೋ ಎಡಿಟ್ ಆಗಿದ್ದೀಯಾ? ಆರೋಪ ಸತ್ಯನಾ? ಇದೆಲ್ಲ ತನಿಖೆಯ ನಂತರ ಗೊತ್ತಾಗುತ್ತೆ ಆದರೆ ಇತ್ತೀಚಿನ ವರದಿ ಪ್ರಕಾರ ಸುಧೀರ್ಘ ವಿಚಾರಣೆಯನ್ನು ನಡೆಸಿ ಮೊನ್ನೆ ಫೆಬ್ರವರಿ 11ನೇ ತಾರೀಕು ಸಿಂಜಿತಾ ಗೆ ಜಾಮಿನ್ ಸಿಕ್ಕಿದೆ, ಆಕೆ ಏನೋ ಇದೀಗ ಆಚೆ ಬಂದ್ಲು ಆದ್ರೆ ಅನ್ಯಾಯವಾಗಿ ಆತನ ಪ್ರಾಣವಾಯಿತು.
ಒಂದು ವಿಡಿಯೋ ಒಂದು ಪೋಸ್ಟ್ ಒಂದು ಕ್ಷಣದ ಕೋಪ ಮತ್ತೆ ಇವರಿಬ್ಬರ ಆಚಾತುರ್ಯದಿಂದ ಆಕೆ ಜೈಲಿಗೆ ಹೋಗಬೇಕಾಯಿತು, ಈ ಕಡೆ ಆತನ ಪ್ರಾಣ ಹೋಯಿತು.
ಇವ್ರಿಬ್ರಲ್ಲಿ ಯಾರು ಸರಿ ಯಾರು ತಪ್ಪು ಅನ್ನೋದಕ್ಕಿಂತ ಹೆಚ್ಚಾಗಿ ಇಲ್ಲಿ ಸೋಶಿಯಲ್ ಮೀಡಿಯಾದ ಪಾತ್ರ ದೊಡ್ಡದಿದೆ ಮತ್ತೆ ಆಕೆ ಆರೋಪ ಮಾಡಿದ್ ರೀತಿ ಕೂಡ ತಪ್ಪು. ಬಸ್ಸಲ್ಲಿ ಆ ರೀತಿ ಏನಾದ್ರೂ ಆಕೆಗೆ ಹಿಂಸೆ ಅನಿಸಿದ್ರೆ ಅಲ್ಲಿ ಅದನ್ನ ಪ್ರಶ್ನೆ ಮಾಡಬೇಕಿತ್ತು ಕಂಡಕ್ಟರ್ ಅಥವಾ ಯಾರಿಗಾದರೂ ಹೇಳಬಹುದು ಆದರೆ ಅದ್ಯಾವುದನ್ನು ಆಕೆ ಮಾಡಲ್ಲ ಜಸ್ಟ್ ವಿಡಿಯೋ ಮಾಡ್ತಾಳೆ ಅಷ್ಟೇ.
ಇನ್ನು ಮಿಸ್ ಬಿಎವಾಗ್ತಿದೆ ಅಂದಾಗ ವಾಯ್ಸ್ ರೈಸ್ ಮಾಡೋದು ತುಂಬಾ ಇಂಪಾರ್ಟೆಂಟ್ ಆದರೆ ಅದನ್ನು ಸರಿಯಾದ ರೀತಿಯಲ್ಲಿ ಮಾಡಬೇಕು ಇಲ್ಲಾಂದ್ರೆ ಈ ರೀತಿ ಕೂಡ ಆಗಬಹುದು ಅನ್ನೋದಿಕ್ಕೆ ಈ ಇನ್ಸಿಡೆಂಟ್ ಬೆಸ್ಟ್ ಎಕ್ಸಾಂಪಲ್.
ಹೇಗಿದ್ರು ಆಕೆ ವಿಡಿಯೋ ಮಾಡಿದ್ಲು, ಪೊಲೀಸ್ನೋರ್ಗೆ ಕಂಪ್ಲೇಂಟ್ ಕೊಡಬಹುದಿತ್ತು. ಆದರೆ ಆಕೆ ವಿಡಿಯೋ ವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತಾಳೆ, ಆಕೆ ಏನ್ ಅನ್ಕೊಂಡು ಆ ರೀತಿ ಮಾಡುದ್ಲು ಗೊತ್ತಿಲ್ಲ, ಬಹುಶಹ ವಿಡಿಯೋ ಏನಾದರೂವೈರಲ್ಲಾದರೆ ಆನಂತರ ಪೊಲೀಸರೇ ಆತ ನನ್ನ ಅರೆಸ್ಟ್ ಮಾಡ್ತಾರೆ, ಇನ್ನೂ ಇದ್ರಿಂದ ಸೋಶಿಯಲ್ ಮೀಡಿಯಾದಲ್ಲಿ ತನಗೆ ವೀವ್ಸ್ ಲೈಕ್ಸ್ ಜನಪ್ರಿಯತೆ ಸಿಗುತ್ತೆ ಅಂತ ಅನ್ಕೊಂಡು ಆ ರೀತಿ ಮಾಡಿದ್ಲು ಅನ್ಸುತ್ತೆ ಆದರೆ ಕೊನೆಗೆ ಆಕೆಗೆ ಅದು ಉಲ್ಟಾ ಹೊಡೆಯಿತು. ಸೊ ಆರೋಪ ಸತ್ಯನೇ ಆಗಿರಬಹುದು ಆದರೆ ಅದನ್ನ ಹೇಳುವಂತ ಪ್ರೋಸಸ್ ಕೂಡ ತುಂಬಾ ಮುಖ್ಯ ಆಗುತ್ತೆ.
ಆದರೆ ಒಂದು ಮಾತ್ರ ಕ್ಲಿಯರ್, ಎಲ್ಲೋ ಕುತ್ಕೊಂಡು ಯಾರೋ ಮಾಡುವಂತ ಒಂದು ಕಮೆಂಟ್ ಒಂದು ಶೇರ್ ಅದು ಇನ್ನೊಬ್ಬರ ಮೇಲೆ ಎಷ್ಟು ಪ್ರಭಾವ ಬೀರುತ್ತೆ ಮತ್ತೆ ಸೋಶಿಯಲ್ ಮೀಡಿಯಾದ ನ್ಯಾಯ ನಿರ್ಣಯ ಎಷ್ಟು ಅಪಾಯಕಾರಿ ಅನ್ನೋದನ್ನ ತೋರಿಸುವಂತ ಇನ್ಸಿಡೆಂಟ್ ಇದು. ಹೀಗಾಗಿ ಸೋಶಿಯಲ್ ಮೀಡಿಯಾ ಸುಪ್ರೀಂ ಕೋರ್ಟ್ ಆಗಬಾರದು ಕಾಮೆಂಟ್ ಮಾಡೋರು ಜಡ್ಜ್ಗಳು ಆಗ್ಬಾರ್ದು .
ಇನ್ಸಿಡೆಂಟ್ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಅನ್ನೋದನ್ನ ಕಾಮೆಂಟ್ ಮಾಡಿ
ಸೊ ಇದಿಷ್ಟು ಈ ಕೇರಳದ ಬಸ್ ಇನ್ಸಿಡೆಂಟ್ ನ ಸಂಬಂಧ ಪಟ್ಟಂತ ಒಂದಷ್ಟು ಮಾಹಿತಿ, ಈ ವಿಡಿಯೋ ಇಷ್ಟ ಆಗಿದ್ರೆ ವಿಡಿಯೋವನ್ನು ಲೈಕ್ ಮಾಡಿ ಚಾನೆಲ್ ಗೆ ಸಬ್ಸ್ಕ್ರೈಬ್ ಮಾಡಿ ಥ್ಯಾಂಕ್ಯು.