ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ Ajith pawar plane crash ನಿಂದ ಸಾವನ್ನಪ್ಪಿದ್ದಾರೆ ಅನ್ನೋ ಸುದ್ದಿ ಇಡೀ ಮಹಾರಾಷ್ಟ್ರ ಜನರನ್ನ ಮತ್ತು ರಾಜಕೀಯ ವಲಯವನ್ನು ಬೆಚ್ಚಿ ಬೆಳಿಸಿದೆ.
• ಕಳೆದ ವರ್ಷ ಜೂನ್ ನಲ್ಲಿ ಅಹಮದಾಬಾದ್ನ ಏರ್ ಇಂಡಿಯಾ ವಿಮಾನ ದುರಂತದ ಬೆನ್ನೆಲ್ಲೆ ಇದೀಗ ಅಜಿತ್ ಪವಾರ್ ಕೂಡ, ವಿಮಾನ ಅಪಘಾತದಿಂದ ಸಾವನ್ನಪ್ಪಿದ್ದಾರೆ.
Read also: ಚಳಿಗಾಲದಲ್ಲಿ ಒಡೆದ ತುಟಿಗಳ ಆರೈಕೆಗೆ 8 ಅದ್ಭುತ ಟಿಪ್ಸ್
• ನೇತಾಜಿ ಸುಭಾಷ್ ಚಂದ್ರ ಬೋಸ್, ಸಂಜಯ್ ಗಾಂಧಿ ಜನರಲ್ ಬಿಪಿನ್ ರಾವತ್ ಆಂಧ್ರದ ರಾಜಶೇಖರ್ ರೆಡ್ಡಿ ಸೌಂದರ್ಯ ಹೀಗೆ ಇನ್ನು ಅನೇಕ ನಾಯಕರ ವಿಮಾನ ದುರಂತದ ಸಾವಿನ ಪಟ್ಟಿ ಬೆಳಿತಾನೆ ಇದೆ ಅದರಲ್ಲೂ ನೇತಾಜಿ ಅವರ ವಿಮಾನ ದುರಂತ ಅಂತ ಒಂದು ಮಿಸ್ಟರಿ ರೀತಿ ಉಳ್ಕೊಂಡಿದೆ.
* ಕಾರು ಬೈಕ್ಗಳ ಅಪಘಾತದಂತೆ ವಿಮಾನ ದುರಂತಗಳು ಕೂಡ ಭಾರತದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ.
* ಇನ್ನು ಅಜಿತ್ ಪವಾರ್ ಅವರ ಅಕಾಲಿಕ ಸಾವು ಅವರ ಬೆಂಬಲಿಗರಿಗೆ ಬರಿಸಲಾಗದ ನೋವಾದರೆ ಇನ್ನೊಂದು ಕಡೆ ಮಹಾರಾಷ್ಟ್ರದ ರಾಜಕೀಯ ಪಡಸಾಲೆಯಲ್ಲಿ ಬಾರಿ ಆತಂಕಕ್ಕೆ ಕಾರಣವಾಗಿದೆ ಈ ರೀತಿ ಅಕಾಲಿಕ ಸಾವುಗಳಾದಾಗ ಅನುಮಾನಗಳು ಸಂದೇಹಗಳು ಹುಟ್ಟೋದು ಸಹಜ ಇಲ್ಲೂ ಕೂಡ ಅದೇ ಆಗ್ತಿದೆ ಹೀಗಾಗಿ ಮಹಾರಾಷ್ಟ್ರದ ಪೊಲೀಸರು ಹಾಗೂ ಡಿಜಿಸಿಎ ಈ ಬಗ್ಗೆ ಹೆಚ್ಚಿನ ತನಿಖೆಯನ್ನು ನಡೆಸಿದ್ದಾರೆ.
* ಮಹಾರಾಷ್ಟ್ರದಲ್ಲಿ ಸದ್ಯದಲ್ಲೇ ಜಿಲ್ಲಾ ಪಂಚಾಯತ್ ಚುನಾವಣೆ ಇದ್ದಿದ್ರಿಂದ ಅಜಿತ್ ಪವರ್ ಚುನಾವಣಾ ಪ್ರಚಾರ ಮತ್ತು ಎಲೆಕ್ಷನ್ ರ್ಯಲಿಗಳಲ್ಲಿ ಭಾಗವಹಿಸುವುದಕ್ಕೆ ಅಂತ ತಮ್ಮ ಸ್ವಕ್ಷೇತ್ರ ಬಾರಾಮತಿಗೆ ಹೋಗಬೇಕಾದರೆ ಈ ಘಟನೆ ನಡೆದಿದೆ.
* ಜನವರಿ 28 ಬೆಳಗ್ಗೆ 8:10 ನಿಮಿಷಕ್ಕೆ ಛತ್ರಪತಿ ಶಿವಾಜಿ ಮಹಾರಾಜ್ ಏರ್ಪೋರ್ಟ್ ನಿಂದ ಹೊರಟಂತಹ ವಿಮಾನ ಬಾರಮತಿಯಲ್ಲಿ ಲ್ಯಾಂಡ್ ಆಗಬೇಕಾದರೆ ವಾತಾವರಣ ಸರಿ ಇಲ್ಲದೆ ಹೆಚ್ಚಾಗಿ ಮಂಜು ಕವಿದಿರುತ್ತೆ ಇದರ ನಡುವೆ ಕೂಡ ಪೈಲೆಟ್ ವಿಮಾನವನ್ನು ಲ್ಯಾಂಡಿಂಗ್ ಮಾಡೋದಕ್ಕೆ ನೋಡ್ತಾರೆ ಆಗ ಅವರಿಗೆ ರನ್ವೇ ಕಾಣ್ಸೋದಿಲ್ಲ ಹೀಗಾಗಿ ಮತ್ತೆ ಆಕಾಶದಲ್ಲಿ ಸ್ವಲ್ಪ ಹೊತ್ತು ಇದ್ದು ಆನಂತರ ಎರಡನೇ ಬಾರಿ ಲ್ಯಾಂಡಿಂಗ್ ಮಾಡೋ ಸಂದರ್ಭದಲ್ಲಿ ವಿಮಾನ ಕ್ರ್ಯಾಶ್ ಲ್ಯಾಂಡಿಂಗ್ ಆಗಿದೆ. ವಿಮಾನ ಬಿದ್ದ ರಭಸಕ್ಕೆ ಸ್ವಲ್ಪ ದೂರ ಉರುಳಿಕೊಂಡು ಹೋಗಿ ಇಬ್ಬಾಗವಾಗಿ ಸ್ಫೋಟಗೊಂಡಿದೆ .
* ಈ ವಿಮಾನದಲ್ಲಿದ್ದ ಅಜಿತ್ ಪವಾರ್ ಸೇರಿದಂತೆ ಅವರ ಭದ್ರತಾ ಸಿಬ್ಬಂದಿ ಮತ್ತು ಇಬ್ಬರು ಪೈಲಟ್ಗಳು ಸೇರಿ ಒಟ್ಟು ಐವರು ಸಾವನಪ್ಪಿದ್ದಾರೆ.
* ಪತನವಾದ ಬೊಂಬಾರ್ಡಿಯರ್ ಲಿಯರ್ಜೆಟ್–45 (ಎಲ್ಜೆ45) ವಿಮಾನವು ದೆಹಲಿ ಮೂಲದ ವಿಎಸ್ಆರ್ ವೆಂಚರ್ಸ್ ಸಂಸ್ಥೆಯ ಒಡೆತನದಲ್ಲಿದೆ. ಹೀಗಾಗಿ ಇದರ ಮೇಲೆ ಕೂಡ ತನಿಖೆಯಾಗೋ ಸಾಧ್ಯತೆ ಇದೆ.
* ಅಜಿತ್ ಪವರ್ ರವರ ರಾಜಕೀಯ ಜರ್ನಿ
ಇನ್ನು ಅಜಿತ್ ಪವಾರ್ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು ಅವರ ಚಿಕ್ಕಪ್ಪ ಶರದ್ ಪವಾರ್ ಅವರ ನೆರಳಿನಲ್ಲೇ ಆದರೂ ಆನಂತರ ತಮ್ಮದೇ ವೈಯಕ್ತಿಕ ವರ್ಚಸ್ಸನ್ನ ಬೆಳೆಸಿಕೊಂಡು ಮಹಾರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾರೆ ಕೆಲವರು ಇವರನ್ನು ಮಹಾರಾಷ್ಟ್ರದ ರಾಜಕೀಯ ಚಾಣಕ್ಯ ಅಂದ್ರೆ ಇವರ ಬೆಂಬಲಿಗರು ಇವರನ್ನ ಪ್ರೀತಿಯಿಂದ ದಾದಾ ಅಂತಾರೆ .
• ಅಜಿತ್ ಅವರು ಮೊದಲ ಬಾರಿಗೆ 1982ರಲ್ಲಿ ಸಹಕಾರಿ ಸಂಘಗಳ ಮೂಲಕ ತಮ್ಮ ಸಾರ್ವಜನಿಕ ಜೀವನ ಪ್ರವೇಶಿಸಿದ ಅವರು, ಪಶ್ಚಿಮ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆ ಮತ್ತು ಸಹಕಾರಿ ಬ್ಯಾಂಕ್ಗಳ ಮೇಲೆ ಭಾರಿ ಹಿಡಿತ ಹೊಂದಿರುತ್ತಾರೆ. ಸುಮಾರು 17 ವರ್ಷ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು ಕೂಡ ಆಗಿರುತ್ತಾರೆ ಹೀಗಾಗಿ 1991ರಲ್ಲಿ ಬಾರಮತಿ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಗೆದ್ದು ಬರುತ್ತಾರೆ ಆನಂತರ ಈ ಬಾರ ಮತಿ ಕ್ಷೇತ್ರವನ್ನು ತಮ್ಮ ಸ್ವಕ್ಷೇತ್ರವನ್ನಾಗಿ ಮಾಡಿಕೊಂಡು ಸತತವಾಗಿ ಏಳು ಬಾರಿ ಇದೇ ಕ್ಷೇತ್ರದಿಂದ ಆರಿಸಿ ಬರ್ತಾರೆ.
• ಮಹಾರಾಷ್ಟ್ರ ರಾಜಕಾರಣದಲ್ಲಿ ನೀರಾವರಿ ಹಣಕಾಸು ಇಂಧನ ಸಚಿವರಾಗಿ ಮತ್ತು ಮಹಾರಾಷ್ಟ್ರದ ಇತಿಹಾಸದಲ್ಲಿ ದಾಖಲೆಯ 6 ಬಾರಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಏಕೈಕ ನಾಯಕ ಅಜಿತ್ ಪವಾರ್.
• ಆದರೆ ತಮ್ಮ ರಾಜಕೀಯ ಗುರು ಚಿಕ್ಕಪ್ಪ ಶರದ್ ಪವಾರ್ ವಿರುದ್ಧವೇ ಬಂಡಾಯ ಎದ್ದು 2023ರಲ್ಲಿ ನ್ಸಿಪಿ ಪಾರ್ಟಿಯನ್ನು ಇಬ್ಬಾಗ ಮಾಡಿ ಬಿಜೆಪಿ ಜೊತೆಗೆ ಕೈಜೋಡಿಸಿ ಮತ್ತೆ ಉಪಮುಖ್ಯಮಂತ್ರಿಯಾಗುತ್ತಾರೆ. ಆಡಳಿತದಲ್ಲಿ ಮತ್ತು ಅಧಿಕಾರಕ್ಕೋಸ್ಕರ ಅತ್ಯಂತ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಂತ ವ್ಯಕ್ತಿ ,
ಇವರ ಹಿಂದೆ ಒಂದಷ್ಟು ಹಗರಣಗಳು ಸ್ಕ್ಯಾನ್ ಗಳು ಅನ್ನೋ ಆರೋಪಗಳು ಕೂಡ ಇವೆ. ಆದರೆ ತಮ್ಮ ಅಧಿಕಾರವನ್ನು ಬಳಸಿ ಅವೆಲ್ಲದಕ್ಕು ಕ್ಲೀನ್ ಚಿಟ್ ಪಡೆದಿದ್ದರು,ಆದರೆ ಇದೀಗ ಇವರ ಅಕಾಲಿಕ ಮರಣ ಮಹಾರಾಷ್ಟ್ರದ ರಾಜಕೀಯ ಚಿತ್ರಣವನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಧ್ಯತೆ ಇದೆ, ಇಗಿರುವ ಮಹಾಯುತಿ ಮೈತ್ರಿಕೂಟಕ್ಕೆ ಅಜಿತ್ ಪವಾರ್ ಆಧಾರಸ್ತಂಭವಾಗಿದ್ರು ಆದರೆ ಇದೀಗ ಮುಂದೇನು ಅನ್ನೋ ಪ್ರಶ್ನೆ ಶುರುವಾಗುತ್ತೆ? ಇದು ಮೈತ್ರಿಕೂಟದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಗೊತ್ತಿಲ್ಲ ಆದರೆ ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಅನುಕಂಪದ ಅಲೆ ವರ್ಕ್ ಆಗಬಹುದು
• ಇನ್ನು ಅಜಿತ್ ಪವಾರ್ ಅವರ Ncp ಬಣದ ಶಾಸಕರು ಈಗ ಯಾರ ಕಡೆ ಮುಖ ಮಾಡುತ್ತಾರೆ? ಅವರು ಮತ್ತೆ ಶರದ್ ಪವಾರ್ ಅವರ ಬಳಿ ಹೋಗುತ್ತಾರಾ? ಅಥವಾ ಬಿಜೆಪಿಯಲ್ಲೇ ವಿಲೀನವಾಗುತ್ತಾರಾ? ಸದ್ಯಕ್ಕೆ ಇವೆಲ್ಲ ಉತ್ತರವಿಲ್ಲದ ಪ್ರಶ್ನೆಗಳು ಅಜಿತ್ ಪವಾರ್ ಅವರ ಸಾವಿಗೆ ದೇಶದ ಪ್ರಮುಖ ಸಿನಿಮಾ ತಾರೆಯರು ರಾಜಕೀಯ ಗಣ್ಯರು ಸಂತಾಪ ಸೂಚಿಸಿದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪದ ಜೊತೆಗೆ ಅನುಮಾನದ ಕೊಂಡಿಯನ್ನು ಆಡ್ ಮಾಡಿದ್ದಾರೆ.
• ವಿಮಾನದಲ್ಲಿದ್ದ ಬ್ಲಾಕ್ ಬಾಕ್ಸ್ ಪತ್ತೆಯಾಗಿ ಅದರ ಪರಿಶೀಲನೆ ನಡೆದ ನಂತರ ದುರಂತಕ್ಕೆ ಎಕ್ಸಾಕ್ಟ್ ಕಾರಣ ಏನು ಅನ್ನೋದು ಗೊತ್ತಾಗುತ್ತೆ.
• ಇನ್ನು ನೀವು ಯಾವುದೇ ವಿಮಾನ ಅಪಘಾತಗಳನ್ನ ನೋಡಿ ಸೇಮ್ ಒಂದೇ ಕಾರಣ ವಾತಾವರಣ ಸರಿ ಇರಲಿಲ್ಲ ಅವಮಾನವಾಗಿ ಪರಿಚಯ ಬಾರಿ ಮಳೆ ಮುಂಚಿತವಾಗಿತ್ತು ತುಂಬಾ ಗಾಳಿ ಇತ್ತು ಆಮೇಲೆ ಟೆಕ್ನಿಕಲ್ ಹೀಗೆ ನೀವು ಯಾವುದೇ ವಿಮಾನದಿರು ಅಂತ ನೋಡಿ ಸಾಮಾನ್ಯವಾಗಿ ಹೀಗಾಗಿ ಕಾರಣ ಹುಡುಕೋ ಬದಲು ಪರಿಷ್ಕಾರಗಳನ್ನ ಸೊಲ್ಯೂಷನ್ ಅನ್ನ ಹುಡುಕ್ಕೊಳೋದು ಬೆಸ್ಟ್ ಭಾರತದ ಸಿವಿಲ್ ಎವಿಯೇಷನ್ ಮಿನಿಸ್ಟರ್ ರೂಲ್ಸ್ ಗಳನ್ನ ಮತ್ತಷ್ಟು ಸ್ಟ್ರೀಟ್ ಮಾಡಬೇಕು ಹಾಗೆ ಸ್ಟ್ರೀಟ್ ಆಗಿ ಫಾಲೋ ಮಾಡುದ್ರೆ ಆಗ್ ಮಾತ್ರ ಈ ರೀತಿ ದುರಂತಗಳು ಸ್ವಲ್ಪ ಕಮ್ಮಿಯಾಗೋದು.